ಕೊಲ್ಕತ್ತಾದ ವಿವಾದಾತ್ಮಕ ಇಮಾಮ್ ಬಾಯಿಗೆ ಬೀಗ ಜಡಿದ ಮಸೀದಿ ಆಡಳಿತ ಸಮಿತಿ

ಕೊಲ್ಕತ್ತಾ, ಮೇ 17: ತನ್ನ ಕಾರಿನಲ್ಲಿದ್ದ ಕೆಂಪು ದೀಪವನ್ನು ತೆಗೆಯಲು ನಿರಾಕರಿಸದ್ದಲ್ಲದೆ ಫತ್ವಾಗಳನ್ನು ನೀಡಿ ವಿವಾದಕ್ಕೊಳಗಾಗುತ್ತಿದ್ದ ಕೊಲ್ಕತ್ತಾದ ಧಾರ್ಮಿಕ ವಿದ್ವಾಂಸ ನೂರ್ ಉರ್ರಹ್ಮಾನ್ ಬರ್ಕಾತಿ ಅವರ ಬಾಯಿಗೆ ಬೀಗ ಜಡಿದಿರುವ ಟಿಪ್ಪು ಸುಲ್ತಾನ್ ಮಸೀದಿಯ ಆಡಳಿತ ಮಂಡಳಿ ಅವರನ್ನು ಶಹೀ ಇಮಾಮ್ ಸ್ಥಾನದಿಂದ ವಜಾಗೊಳಿಸಿದೆ.
ದೇಶದ ವಿರುದ್ಧ “ಆಕ್ಷೇಪಾರ್ಹ ಹಾಗೂ ಉದ್ರೇಕಕಾರಿ” ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಗಿದೆ ಎಂದು ಮಸೀದಿಯ ಟ್ರಸ್ಟಿಗಳ ಸಭೆಯ ನಂತರ ಘೋಷಿಸಲಾಗಿದೆ,.
ಸಲ್ಮಾನ್ ರಶ್ದಿ, ಲೇಖಕಿ ತಸ್ಲೀಮಾ ನಸ್ರೀನ್, ಕೆನಡಿಯನ್ ಅಂಕಣಕಾರರಾದ ತರೇಕ್ ಫತೇಹ್ ಸೇರಿದಂತೆ ಪ್ರಧಾನಿ ಮೋದಿಯವರ ವಿರುದ್ಧ ಫತ್ವಾ ಹೊರಡಿಸಿದ್ದ ಬರ್ಕಾತಿ ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದರು. “ಭಾರತವು ಹಿಂದೂ ರಾಷ್ಟ್ರವಾದಲ್ಲಿ ದೇಶದ ವಿರುದ್ಧ ಜಿಹಾದ್ ಮಾಡಲಾಗುವುದು” ಎನ್ನುವ ಪ್ರಚೋದನಕಾರಿ ಹೇಳಿಕೆಯ ನಂತರ ಮಮತಾ ಬ್ಯಾನರ್ಜಿಯವರ ಬೆಂಬಲವೂ ಅವರಿಗೆ ಇಲ್ಲದಾಯಿತು. ಇಷ್ಟೇ ಅಲ್ಲದೆ, ತನ್ನ ಕಾರಿನಲ್ಲಿದ್ದ ಕೆಂಪು ದೀಪವನ್ನೂ ತೆಗೆಯುವುದನ್ನು ನಿರಾಕರಿಸಿ ಅವರುವ ವಿವಾದಕ್ಕೀಡಾಗಿದ್ದರು.







