ಕೌಶಲ್ಯ ಕರ್ನಾಟಕ ಯೋಜನೆ ಸ್ವಯಂ ಉದ್ಯೋಗಕ್ಕೆ ಅನುಕೂಲ: ಡಾ.ಜಿ.ಪರಮೇಶ್ವರ್

ಚಿಕ್ಕಮಗಳೂರು, ಮೇ: 17: ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಯುವಜನರಿಗೆ ವೃತಿ ತರಬೇತಿ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗಲ್ಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಅವರು ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀತೆ ಮತ್ತು ಜೀವನೋಪಾಯ ಇಲಾಖೆ ಆಶ್ರಯದಲ್ಲಿ ಎಐಟಿ ಕಾಲೇಜಿನಲ್ಲಿ ನಡೆದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷ 60,000 ಕ್ಕೂ ಹೆಚ್ಚಿ ವಿದ್ಯಾರ್ಥಿಗಳು ಎಂಜಿನಿಯರ್ ಪದವಿ ಮುಗಿಸಿ, 6.85 ಲಕ್ಷ ಯುವಜನರು ಎಸೆಸೆಲ್ಸಿಯಲ್ಲಿ, 3.69 ಲಕ್ಷ ಯುವಜನರು ಪಿಯುಸಿ ಪರೀಕ್ಷೆಯನ್ನು, 5 ಲಕ್ಷಕ್ಕೂ ಹೆಚ್ಚು ಯುವಕ, ಯುವತಿಯರು ವಿವಿಧ ಪದವಿ ಪರೀಕ್ಷೆಗಳಲ್ಲಿ ತೆರ್ಗಡೆ ಹೊಂದಿ ಹೊರ ಬರುತ್ತಿದ್ದಾರೆ.
ಇವರಿಗೆ ಪದವಿ ನೀಡಿದರೆ ಸಾಲದು ಅವರು ಸ್ವಾವಲಂಬಿಗಳಾಗಲು ತರಬೇತಿಯ ಅಗತ್ಯತೆ ಇದೆ. ಇದನ್ನು ಮನಗಂಡ ನಮ್ಮ ಸರಕಾರ 2017-18ನೇ ಸಾಲಿನ ಅಯುವ್ಯಯದಲ್ಲಿ 200 ಕೋಟಿ ರೂ.ಗಳ ಅನುದಾನದೊಂದಿಗೆ ಕೌಶಲ್ಯಾಭಿವೃದ್ಧಿ ಮಿಷನ್ ಪ್ರಾರಂಭಿಸಲಾಗುವುದು ಎಂದು ಘೋಷಿಸಿದಂತೆ ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದ ಅವರು ಅಭ್ಯರ್ಥಿಗಳು ತಮಗೆ ಆಸಕ್ತಿ ಇರುವ ರಂಗದಲ್ಲಿ ತರಬೇತಿ ಪಡೆಯಬಹುದ್ದಾಗಿದು ಸಾಮಾಜಿಕವಾಗಿ ಹಾಗೂ ಅಭ್ಯರ್ಥಿ ಸ್ವಾವಲಂಭಿಯಾಗಲು ಅನುಕೂಲವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಜಿ.ಸತ್ಯವತಿ, ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಾಯ, ಜಿಪಂ ಅಧ್ಯಕ್ಷೆ ಚೈತ್ರಶ್ರೀ, ಅರಣ್ಯ ವಸತಿ ವಿಹಾರ ದಾಮಗಳ ನಿಗಮದ ಅಧ್ಯಕ್ಷ ಎ.ಎನ್. ಮಹೇಶ್ ಮಾತನಾಡಿದರು.
ಸಾಂಕೇತಿಕವಾಗಿ ಕುಮಾರಿ ವಿನುತಾ ಎಂಬ ಅಭ್ಯರ್ಥಿಯನ್ನು ನೋಂದಣಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಿಡಿಎ ಅಧ್ಯಕ್ಷ ಸೈಯದ್ ಹನೀಫ್ ಜಿಪಂ ಸಿಇಓ ಡಾ. ರಾಗಪ್ರಿಯ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.





