ಹತ್ತಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 160 ರೂ.ಹೆಚ್ಚಿಸಲು ಚಿಂತನೆ

ಹೊಸದಿಲ್ಲಿ,ಮೇ 17: ಜುಲೈನಿಂದ ಆರಂಭವಾಗಲಿರುವ 2017-18ನೇ ಸಾಲಿನ ಬೆಳೆ ವರ್ಷಕ್ಕೆ ಹತ್ತಿಯ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯನ್ನು ಪ್ರತಿ ಕ್ವಿಂಟಲ್‌ಗೆ 160 ರೂ.ಗಳಷ್ಟು ಹೆಚ್ಚಿಸಿ 4,320 ರೂ.ಗೆ ನಿಗದಿಗೊಳಿಸಲು ಸರಕಾರವು ಚಿಂತನೆ ನಡೆಸುತ್ತಿದೆ.ಸರಕಾರಿ ಸಂಶೋಧನಾ ಸಂಸ್ಥೆ ಐಸಿಎಆರ್ ಅಭಿವೃದ್ಧಿಗೊಳಿಸಿರುವ ಬಿಟಿ ಹತ್ತಿ ಮಾದರಿಯನ್ನು ಉತ್ತೇಜಿಸಲೂ ಕೇಂದ್ರವು ಯೋಜಿಸುತ್ತಿದ್ದು, ಉತ್ತಮ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಭವಿಷ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಈ ಮಾದರಿಯ ಹತ್ತಿಯ ಬಿತ್ತನೆ ಮತ್ತು ಉತ್ತಮ ಇಳುವರಿಯನ್ನು ನಿರೀಕ್ಷಿಸಿದೆ.
ಪ್ರಸಕ್ತ 2016-17ನೇ ಬೆಳೆಸಾಲಿಗೆ ಮಧ್ಯಮ ಎಳೆಗಳ ಹತ್ತಿಗೆ ಪ್ರತಿ ಕ್ವಿಂಟಲ್‌ಗೆ 3,860 ರೂ.ಮತ್ತು ಉದ್ದ ಎಳೆಗಳ ಹತ್ತಿಗೆ 4,160 ರೂ.ಗಳ ಎಂಎಸ್‌ಪಿಯನ್ನು ನಿಗದಿಗೊಳಿ ಸಲಾಗಿದೆ.
Next Story





