ಮೇ 19ರಂದು ಉಡುಪಿಯಲ್ಲಿ ಉದ್ಯೋಗ ಮೇಳ
ಉಡುಪಿ, ಮೇ 17: ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮೇಳವನ್ನು ಮೇ 19ರಂದು ಬೆಳಗ್ಗೆ 10ರಿಂದ ಸಂಜೆ 5ಗಂಟೆಯ ವರೆಗೆ ಉಡುಪಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಮೆಳದಲ್ಲಿ ಪ್ರಖ್ಯಾತ ಸರಿಸುಮಾರು 100 ಕಂಪೆನಿಗಳು ಭಾಗವಹಿಸಲಿದ್ದು, ಯುವಜನತೆ ಈ ಸದಾವಕಾಶವನ್ನು ಉಪಯೋಗಿಸಿಕೊಂಡು ತಮ್ಮ ಜೀವನ ವನ್ನು ಉತತಿಮ ಪಡಿಸಿಕೊಳ್ಳುವಂತೆ ಇಲಾಖೆ ತಿಳಿಸಿದೆ.
ಇಲಾಖೆಯು 2013ರಿಂದ ಉಚಿತ ಉದ್ಯೋಗ ಆಧಾರಿತ ವೃತ್ತಿ ಕೌಶಲ್ಯ ತರಬೇತಿಯನ್ನು ಆರಂಭಿಸಿದ್ದು, ನಿರುದ್ಯೋಗ ಯುವಕ ಯುವತಿಯರಿಗೆ ವೃತ್ತಿ ನಿರತ ತರಬೇತಿ ನಿಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಈ ಯೋಜನೆಯ ಉದ್ದೇಶ.
ನಿರುದ್ಯೋಗ ಸಮಸ್ಯೆ ಮತ್ತು ಖಾಸಗಿ ಸಂಸ್ಥೆಗೆ ಬೇಕಾಗಿರುವ ಅರ್ಹ ಅಭ್ಯರ್ಥಿಗಳನ್ನು ಪಡೆಯಲು ಆಗುತ್ತಿರುವ ತೊಂದರೆಗಳನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಆಸಕ್ತ ನಿರುದ್ಯೋಗ ಯುವಕ ಯುವತಿಯರಿಗೆ ಅವರು ಇಚ್ಛಿಸುವ ಕ್ರೀಡೆ, ಕೆಲಸ, ಕಂಪೆನಿಗಳಲ್ಲಿ ತಾಂತ್ರಿಕ/ಅರೆತಾಂತ್ರಿಕ ತರಬೇತಿ ನಿಡಿ ಅವರನ್ನು ನಿರುದ್ಯೋಗ ಸಮಸ್ಯೆಯಿಂದ ಹೊರಬರಲು ಸೂಕ್ತ ತರಬೇತಿಯನ್ನು ನೀಡಲಾಗುತ್ತದೆ.
ಯುವಜನ ಮತ್ತು ಕ್ರೀಡಾ ಇಲಾಖೆ ಮತ್ತು ಮ್ಯಾನ್ಡಮಸ್ ಎಜುಕೇಶನ್ ಅಕಾಡೆಮಿ ಜಂಟಿ ಸಹಯೋಗದೊಂದಿಗೆ ಸಮಾಜದ ಎಲ್ಲಾ ಬಡಜನತೆಗೆ ಸೂಕ್ತ ತರಬೇತಿ ನೀಡಿ ಅವರನ್ನು ವಿವಿಧ ಆಸಕ್ತ ಕಂಪೆನಿಗಳ ಜತೆ ಒಡಂಬಡಿಕೆ ಮಾಡಿಕೊಂಡು ಒಂದೇ ಸೂರಿನಡಿ ಅರ್ಹ ಅ್ಯರ್ಥಿಗಳನ್ನು ಸಂದರ್ಶನ ಮಾಡಿ ಸ್ಥಳದಲ್ಲೇ ಉತ್ತಮ ಅ್ಯರ್ಥಿಗಳಿಗೆ ಉದ್ಯೋಗ ನೀಡುವ ಉತ್ತಮ ಕೆಲಸಕ್ಕೆ ಆಹ್ವಾನಿಸಲಾಗುತ್ತಿದೆ.
ಮ್ಯಾನ್ಡಮಸ್ ಎಜುಕೇಶನ್ ಅಕಾಡಮಿ ವತಿಯಿಂದ ಎಲ್ಲಾ ಅ್ಯರ್ಥಿಗಳಿಗೆ ಸೂಕ್ತವಾಗುವಂತಹ ಮತ್ತು ಅವರ ವಿದ್ಯಾರ್ಹತೆಗೆ ತಕ್ಕಂತೆ ಬಿಎಫ್‌ಎಸ್‌ಐ, ಐಟಿ, ಐಟಿಇಎಸ್, ಹಾಸ್ಪಿಟಲಿಟಿ, ಸ್ಪೋರ್ಟ್ಸ್, ರಿಟೈಲ್ ಇತರ ಕಂಪೆನಿಗಳಲ್ಲಿ ಸಂದರ್ಶನ ಮಾಡಿಸಿ, ಸ್ಥಳದಲ್ಲೇ ಆಯ್ಕೆಯಾದವರಿಗೆ ಆಯ್ಕೆ ಪತ್ರವನ್ನು ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.







