ಮೇ 20ರಿಂದ ಆಳ್ವಾಸ್‌ನಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವ
ಮೂಡುಬಿದಿರೆ, ಮೇ 17: ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಯೋಜಿತ ರಾಷ್ಟ್ರೀಯ ಮಟ್ಟದ 2 ದಿನಗಳ ದಕ್ಷಿಣ ಕನ್ನಡ ಪ್ರಾಂತೀಯ ವಿಭಾಗದ ಇಂಜಿನಿಯರಿಂಗ್ ವಿಧ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ ‘ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವವು (INSEF) ಮೇ 20, 21ರಂದು ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿರುವ ವಿಷಯವಾರು ಆಸಕ್ತಿಯನ್ನು ಗುರುತಿಸಿ ಸೃಜನಶೀಲ ಮತ್ತು ನವೀನ ಆವಿಷ್ಕಾರಗಳನ್ನು ಈ ಉತ್ಸವದ ಮೂಲಕ ವೇದಿಕೆ ಕಲ್ಪಿಸಿ ಗುರುತಿಸಿ ಪ್ರೋತ್ಸಾಹಿಸುವುದು. ಈಗಾಗಲೇ ಸ್ಪರ್ಧೆಯಲ್ಲಿ ಭಾಗವಹಿಸುವ 30 ಗುಣಮಟ್ಟದ ಯೋಜನಾ ತಂಡಗಳನ್ನು ಆಯ್ಕೆ ಮಾಡಿದ್ದು ಇದರ ಮೂಲಕ ತಂತ್ರಜ್ಞಾನಕ್ಕೆ ಬೇಕಾಗುವ ಸಂಶೋಧನೆ ಮತ್ತು ಅಭಿವೃದ್ದಿಗೆ ಪೂರಕವಾದಂತಹ ವಾತಾವರಣ ಕಲ್ಪಿಸಲಾಗುವುದು. ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ 10 ವಿಶೇಷ ಪರಿಣಿತರು ಪಾಲ್ಗೊಳ್ಳಲಿದ್ದಾರೆ ಎಂದು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





