ವಿಶಾಖಪಟ್ಟಣಕ್ಕೆ ಸ್ವಚ್ಛ ರೈಲು ನಿಲ್ದಾಣದ ಹೆಗ್ಗಳಿಕೆ

ಹೊಸದಿಲ್ಲಿ, ಮೇ 17: ದೇಶದಲ್ಲಿರುವ ಅತ್ಯಂತ ಕಾರ್ಯನಿಭಿಡತೆಯ ರೈಲು ನಿಲ್ದಾಣಗಳಲ್ಲಿ ವಿಶಾಖಪಟ್ಟಣ ರೈಲು ನಿಲ್ದಾಣ ಅತ್ಯಂತ ಸ್ವಚ್ಛ ರೈಲು ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದರೆ, ಬಿಹಾರದ ದರ್ಭಾಂಗ ರೈಲು ನಿಲ್ದಾಣ ಅತ್ಯಂತ ಕೊಳಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ.
ಈ ಕುರಿತು ನಡೆಸಲಾದ ಸಮೀಕ್ಷೆಯ ವರದಿಯನ್ನು ರೈಲ್ವೇ ಸಚಿವ ಸುರೇಶ್ ಪ್ರಭು ಬುಧವಾರ ಬಿಡುಗಡೆಗೊಳಿಸಿದರು. ಸಿಕಂದರಾಬಾದ್ ದ್ವಿತೀಯ, ಜಮ್ಮು-ಕಾಶ್ಮೀರ ತೃತೀಯ ಸ್ಥಾನ ಪಡೆದರೆ ಹೊಸದಿಲ್ಲಿ ರೈಲು ನಿಲ್ದಾಣ 39ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
‘ಸ್ವಚ್ಛ ರೈಲು’ ಅಭಿಯಾನದ ಅಂಗವಾಗಿ ನಡೆಸಲಾಗಿರುವ ಈ ಸಮೀಕ್ಷೆಯನ್ನು ‘ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ’ ನಡೆಸಿತ್ತು. ಫ್ಲಾಟ್‌ಫಾರಂಗಳಲ್ಲಿ ಸ್ವಚ್ಛ ಟಾಯ್ಲೆಟ್‌ಗಳು, ಸ್ವಚ್ಛ ರೈಲು ಹಳಿ, ಸ್ಟೇಷನ್‌ನಲ್ಲಿರುವ ಕಸದ ಡಬ್ಬಿಗಳ ಸ್ವಚ್ಛತೆ ಇತ್ಯಾದಿಗಳ ಆಧಾರದಲ್ಲಿ ನೀಡಲಾಗುವ ಅಂಕವನ್ನು ಪರಿಗಣಿಸಿ ಈ ಆಯ್ಕೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
Next Story





