ಅಂಡರ್-17 ವಿಶ್ವಕಪ್ ಮೊದಲ ಹಂತದ ಟಿಕೆಟ್‌ಗಳ ಮಾರಾಟ

ಹೊಸದಿಲ್ಲಿ, ಮೇ 17: ಕೋಲ್ಕತಾದಲ್ಲಿ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್‌ನ ಮೊದಲ ಹಂತದ ಎಲ್ಲ 10 ಪಂದ್ಯಗಳ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿವೆ.
ಕೋಲ್ಕತಾದಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ಬೆಲೆ 480 ರೂ., 960 ರೂ. ಹಾಗೂ 1,920 ರೂ. ಆಗಿರುತ್ತದೆ.
ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯ ಸಹಿತ ಎಲ್ಲ 10 ಪಂದ್ಯದ ಟಿಕೆಟ್‌ಗಳೆಲ್ಲವೂ ಮಾರಾಟವಾಗಿವೆ.
ಬಾರ್ಸಿಲೋನದ ಮಾಜಿ ನಾಯಕ ಕಾರ್ಲ್ಸ್ ಪುಯೊಲ್ ಮಂಗಳವಾರ ಟಿಕೆಟ್ ಮಾರಾಟಕ್ಕೆ ಚಾಲನೆ ನೀಡಿದರು.
85,000 ಆಸನ ಸಾಮರ್ಥ್ಯದ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ಎಫ್ ಗುಂಪಿನ ಆರು ಪಂದ್ಯಗಳಲ್ಲದೆ, 16 ಸುತ್ತಿನ ಪಂದ್ಯ, ಒಂದು ಕ್ವಾರ್ಟರ್‌ಫೈನಲ್, ಮೂರನೆ ಸ್ಥಾನಕ್ಕಾಗಿ ನಡೆಯುವ ಪ್ಲೇ-ಆಫ್ ಪಂದ್ಯ ಹಾಗೂ ಫೈನಲ್ ಪಂದ್ಯಗಳು ನಡೆಯುತ್ತವೆ. ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಯು .6 ರಿಂದ 28ರ ತನಕ ನಡೆಯಲಿದೆ.
Next Story





