ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ ಉತ್ತಮ ಸಾಧನೆ: ಕಪಿಲ್‌ದೇವ್ ವಿಶ್ವಾಸ
ಮುಂಬೈ, ಮೇ 17: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಕ್ರಿಕೆಟ್ ಲೆಜಂಡ್ ಕಪಿಲ್‌ದೇವ್ ವಿಶ್ವಾಸವ್ಯಕ್ತಪಡಿಸಿದ್ದಾರೆ.
‘‘ಕೊಹ್ಲಿ ಫಾರ್ಮ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೊಹ್ಲಿಯ ಸಾಮರ್ಥ್ಯ ಹಾಗೂ ಪ್ರತಿಭೆಯ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲಿನ ಲಯಕ್ಕೆ ಮರಳಲಿದ್ದಾರೆ. ಅವರು ರನ್ ಗಳಿಸದೇ ಇರಲು ಯಾವುದೇ ಕಾರಣಗಳಿಲ್ಲ. ಕೊಹ್ಲಿ ತಂಡದ ಪ್ರಮುಖ ಆಟಗಾರ. ಅವರು ರನ್ ಗಳಿಸಲು ಆರಂಭಿಸಿದರೆ ಇಡೀ ತಂಡ ಅವರಿಂದ ಉತ್ತೇಜಿತಗೊಳ್ಳಲಿದೆ’’ಎಂದು ಕಪಿಲ್‌ದೇವ್ ಅಭಿಪ್ರಾಯಪಟ್ಟರು.
ಕೊಹ್ಲಿ 2016ರ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು. ಈ ಬಾರಿ 10 ಪಂದ್ಯಗಳಲ್ಲಿ ಕೇವಲ 308 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಗರಿಷ್ಠ ಸ್ಕೋರ್ 64 ರನ್ ಗಳಿಸಿದ್ದಾರೆ. ಹಾಲಿ ಚಾಂಪಿಯನ್ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಜೂ.4 ರಂದು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ





