ತುಂಬೆ ಬಿ.ಎ. ಐಟಿಐ ಉತ್ತಮ ಸಾಧನೆ
ಐಟಿಐ ಪರೀಕ್ಷಾ ಫಲಿತಾಂಶ
ಬಂಟ್ವಾಳ, ಮೇ 17: ಹೊಸದಿಲ್ಲಿಯ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ತು ಮತ್ತು ಕರ್ನಾಟಕ ಸರಕಾರದ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ 2017ರ ಜನವರಿಯಲ್ಲಿ ನಡೆಸಿದ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಥಮ ಎಂ.ಆರ್.ಎ.ಸಿ. ವಿಭಾಗವು ಶೇಕಡಾ 100 ಫಲಿತಾಂಶ ಗಳಿಸಿದೆ. ದ್ವಿತೀಯ ಎಂ.ಆರ್.ಎ.ಸಿ. ಮತ್ತು ದ್ವಿತೀಯ ಇಲೆಕ್ಟ್ರಾನಿಕ್ಸ್ ಶೇ. 95 ಫಲಿತಾಂಶ ಗಳಿಸಿದ್ದು, ಡೀಸೆಲ್ ಮೆಕ್ಯಾನಿಕ್ ಹಾಗೂ ಪ್ರಥಮ ಇಲೆಕ್ಟ್ರಾನಿಕ್ಸ್ ವಿಭಾಗವು ಉತ್ತಮ ಫಲಿತಾಂಶ ಗಳಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ನವೀನ್ ಕುಮಾರ್ ಕೆ.ಎಸ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





