ಉತ್ತರ ಪ್ರದೇಶದಲ್ಲಿ ಬಿಎಸ್ಪಿ ನಾಯಕನ ಗುಂಡಿಟ್ಟು ಕೊಲೆ

ಲಕ್ನೋ, ಮೇ 18: ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ನಾಯಕರೊಬ್ಬರನ್ನು ಮನೆಗೆ ನುಗ್ಗಿ ಗುಂಡಿಟ್ಟು ಕೊಲೆಗೈದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಬಿಎಸ್‌ಪಿ ನಾಯಕ ಕೈಲಾಸ್ ಚಂದ್ರ ಟೆಕೆದಾರ್ ಅವರ ಟಿಗಾರಿಯಾ ಭುಡ್ ನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಕೈಲಾಸ್ ಚಂದ್ರ ಕೈಯಲ್ಲಿ ಪಿಸ್ತೂಲ್ ಇದ್ದರೂ ಅವರಿಗೆ ಏನನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಈ ಸಂಬಂಧ ಪೊಲೀಸರು ಕೈಲಾಸ್ ಚಂದ್ರ ಅವರ ಅಣ್ಣ, ಮಾಜಿ ಪತ್ನಿ, ಗರ್ಲ್‌ಫ್ರೆಂಡ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Next Story





