ಕಾಶ್ಮೀರದ ಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣಿಟ್ಟ ಬಿಜೆಪಿ !

ಹೊಸದಿಲ್ಲಿ,ಮೇ 18: ಕಾಶ್ಮೀರದಲ್ಲಿ ದಿನದಿಂದದಿನಕ್ಕೆ ಹೆಚ್ಚುತ್ತಿರುವ ಹಿಂಸಾ ಕೃತ್ಯಗಳಿಗೆ ಮದ್ದು ಅರೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಬಿಜೆಪಿ ಬಯಸುತ್ತಿದೆ. ಮುಖ್ಯಮಂತ್ರಿಯ ಬದಲಾವಣೆಯಿಂದ ಜನರ ಅಸಂತೃಪ್ತಿಯನ್ನುಕಡಿಮೆಗೊಳಿಸಬಹುದು ಎಂದು ಬಿಜೆಪಿ ಭಾವಿಸುತ್ತಿದೆ. ಈವಿಷಯವನ್ನು ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರೊಡನೆ ಚರ್ಚಿಸಿದೆ. ಆದರೆ ಅವರು ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಲಿಲ್ಲ.
ಈ ಹಿಂದೆ ಮೆಹಬೂಬ ಮುಫ್ತಿ ದಿಲ್ಲಿಗೆ ಬಂದಿದ್ದಾಗ ಬಿಜೆಪಿ ನಾಯಕರು ಮುಖ್ಯಮಂತ್ರಿ ಬದಲಾವಣೆಯ ಕುರಿತು ಅವರೊಡನೆ ಚರ್ಚಿಸಿದ್ದರು ಎಂದು ಪ್ರಮುಖ ರಾಷ್ಟ್ರೀಯ ಚಾನೆಲ್‌ವೊಂದು ವರದಿ ಮಾಡಿದೆ. ಆರು ತಿಂಗಳಿಗೊಮ್ಮೆ ಸರಕಾರದ ಮಿತ್ರಪಕ್ಷಗಳಲ್ಲಿ ಯಾವುದಾದರೊಂದು ಪಕ್ಷಕ್ಕೆ ಆಡಳಿತವನ್ನು ಹಸ್ತಾಂತರಿಸಬೇಕು ಎಂದು ಬಿಜೆಪಿ ಚರ್ಚೆ ವೇಳೆ ಪ್ರಸ್ತಾಪ ಮುಂದಿಟ್ಟಿತ್ತು.
ಪಕ್ಷ ಅಥವಾ ಮುಖ್ಯಮಂತ್ರಿಯ ವಿರುದ್ಧ ಜನರಲ್ಲಿರುವ ಅಸಮಾಧಾನವನ್ನು ಕಡಿಮೆ ಗೊಳಿಸಲು ಈ ಉಪಾಯ ಸಹಾಯಕವಾಗಬಹುದು ಎಂದು ಬಿಜೆಪಿ ಹೇಳಿದೆ. ಆದರೆ ಮೆಹಬೂಬ ಮುಫ್ತಿ ಇದಕ್ಕೆ ಸಹಮತ ವ್ಯಕ್ತಪಡಿಸಿಲ್ಲ ಎಂದು ಚ್ಯಾನೆಲ್ ವರದಿ ತಿಳಿಸಿದೆ. ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿಮೆಹಬೂಬ ಮುಫ್ತಿ ಜನಬೆಂಬಲ ಕಳೆದುಕೊಂಡಿದ್ದಾರೆ. ಕಳೆದ ದಿವಸ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನರ ವಿರೋಧದಿಂದಾಗಿ ಭಾಗವಹಿಸಲು ಕೂಡಾ ಮೆಹಬೂಬಮುಫ್ತಿಗೆ ಸಾಧ್ಯವಾಗಿರಲಿಲ್ಲ. ಪಿಡಿಪಿ,ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇ ಕಾಶ್ಮೀರಿಗಳ ವಿರೋಧಕ್ಕೆ ಕಾರಣವೆಂದು ಹೇಳಲಾಗುತ್ತಿದೆ.







