ಭಾರತೀಯ ಸಿನೆಮಾ ರಂಗದಲ್ಲಿಯೇ ಮೊತ್ತಮೊದಲ ಮಹಿಳಾ ಸಂಘಟನೆ ಶೀಘ್ರ ಅಸ್ತಿತ್ವಕ್ಕೆ

ಕೊಚ್ಚಿ(ಕೇರಳ), ಮೇ 18: ಮಲೆಯಾಳಂ ಸಿನೆಮಾದಲ್ಲಿರುವ ಮಹಿಳೆಯರಿಗಾಗಿ ಪ್ರತ್ಯೇಕ ಸಂಘಟನೆ ರೂಪುಗೊಳ್ಳುತ್ತಿದೆ. “ವುಮೆನ್ ಕಲಕ್ಟೀವ್ ಇನ್ ಸಿನೆಮಾ” ಎನ್ನುವ ಹೆಸರಿನಲ್ಲಿ ಸಂಘಟನೆ ಅಸ್ತಿತ್ವವನ್ನು ಪಡೆಯಲಿದೆ. ರಿಮಾ ಕಲ್ಲಂಗಲ್, ಮಂಜುವಾರ್ಯರ್, ಸಜಿತ ಮಠತ್ತಿಲ್, ವಿಧು ವಿನ್ಸೆಂಟ್, ಪಾರ್ವತಿ ಮುಂತಾದವರ ನೇತೃತ್ವದಲ್ಲಿ ಸಂಘಟನೆ ರೂಪುಗೊಳ್ಳುತ್ತಿದೆ.ಸಂಘಟನೆಯ ನೇತೃತ್ವ ಇಂದುಮುಖ್ಯಮಂತ್ರಿಯನ್ನು ಭೇಟಿಯಾಗಲಿದೆ.ಭಾರತೀಯ ಸಿನೆಮಾ ರಂಗದಲ್ಲಿಯೇ ಮಹಿಳೆಯರಿಗಾಗಿ ಪ್ರತ್ಯೇಕ ಸಂಘಟನೆ ಪ್ರಥಮ ಬಾರಿ ಕೇರಳದಲ್ಲಿ ರೂಪುಗೊಳ್ಳುತ್ತಿದೆ.
ಸಿನೆಮಾರಂಗದ ವಿವಿಧ ಕ್ಷೇತ್ರದಲ್ಲಿ ದುಡಿಯುವ ಮಹಿಳಾ ಮಣಿಗಳನ್ನು ಒಗ್ಗೂಡಿಸುವುದು ಸಂಘಟನೆಯ ಉದ್ದೇಶವಾಗಿದೆ. ಅಮ್ಮಾ,ಫೆಫ್ಕಾ ಗಳಿಗೆ ಬದಲಿಯಾಗಿ ಅಥವಾ ಅವುಗಳ ವಿರೋಧದಲ್ಲಿ ಮಹಿಳೆಯರು ಪ್ರತ್ಯೇಕ ಸಂಘಟನೆ ರೂಪುನೀಡುತ್ತಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.
ಸೂಪರ್ ತಾರೆಯರ ಸ್ಥಾನಮಾನ ಹೊಂದಿರುವ ನಟಿಯರು, ಅತ್ಯಂತ ಕೆಳ ಹಂತದಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಸೇರಿಸಿ ಸಂಘಟನೆ ಅಸ್ತಿತ್ವಕ್ಕೆ ಬರುತ್ತಿದೆ.
ರಾತ್ರೆ ಹಗಲೆನ್ನದೆ ದಿನದ 24 ಗಂಟೆಯೂ ಕೆಲಸ ಮಾಡಬೇಕಾದ ಇವರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇವುಗಳನ್ನೆಲ್ಲ ಚರ್ಚಿಸಲು ಒಂದು ವೇದಿಕೆಯಾಗಿ ಸಂಘಟನೆ ಅಸ್ತಿತ್ವಪಡೆದುಕೊಳ್ಳುತ್ತಿದೆ ಎಂದು ಸಂಘಟಕರು ಹೇಳಿದ್ದಾರೆ.







