ಸೌದಿಅರೇಬಿಯ: ಜಿದ್ದಾ ಬಂದರಿನಲ್ಲಿ ಲಂಗರು ಹಾಕಿದ ಭಾರತದ ಮೂರು ಯುದ್ಧ ಹಡಗುಗಳು

ಜಿದ್ದ, ಮೇ 18: ಆಫ್ರಿಕಾದ ಸಮುದ್ರ ತೀರಗಳಲ್ಲಿ ವಿನ್ಯಾಸವಾಗಲಿರುವ ಭಾರತದ ಯುದ್ಧ ಹಡಗುಗಳು ಜಿದ್ದಾದಲ್ಲಿರುವ ಇಸ್ಲಾಮಿಕ್ ಬಂದರಿಗೆ ಈಗಾಗಲೇ ಆಗಮಿಸಿವೆ. ಐಎನ್‌ಎಸ್ ಮುಂಬೈ, ಐಎನ್‌ಎಎಸ್ ತೃಶೂಲ್, ಐಎನೆಸ್ ಆದಿತ್ಯ ಹಡುಗುಗಳು ಮಂಗಳವಾರವೇ ಜಿದ್ದಾದ ಬಂದರಿಗೆ ಬಂದು ತಲುಪಿದ್ದು,ಮೂರುದಿವಸಗಳ ಬಳಿಕ ಇಲ್ಲಿಂದ ರವಾನೆಗೊಳ್ಳಲಿವೆ ಎಂದು ಭಾರತದ ಧೂತವಾಸ ತಿಳಿಸಿದೆ.
ಸೌದಿಅರೇಬಿಯ ಮತ್ತು ಭಾರತ ಪರಸ್ಪರ ನೌಕಾ ಸಂಬಂಧವನ್ನು ಉತ್ತಮಗೊಳಿಸುವ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸಲಾಗಿದೆ. ಈಗ ಅಡ್ಮಿರಲ್ ಆರ್. ಬಿ. ಪಂಡಿತ್‌ರ ನೇತೃತ್ವದ ನೌಕಾದಳದ ಸೈನಿಕರು ಹಡಗಿನಲ್ಲಿದ್ದಾರೆ.
ಕ್ಷಿಪಣಿಗಳನ್ನು ಧ್ವಂಸಮಾಡುವ ಸಾಮರ್ಥ್ಯವಿರುವ ಅಸ್ತ್ರಗಳನ್ನು ಅಳವಡಿಸಲಾಗಿರುವ ಭಾರತದ ಅತ್ಯಾಧುನಿಕ ಯುದ್ಧ ಹಡಗುಗಳು ಇವು. ಇದೇವೇಳೆ ಸೌದಿಅರೇಬಿಯದ ನೌಕಾಸೇನೆ ಆಯೋಜಿಸುವ ಔತಣಕೂಟದಲ್ಲಿ ಭಾರತದ ಸೈನಿಕರು ಭಾಗವಹಿಸಲಿದ್ದಾರೆ ಹಾಗೂ ಉಭಯ ದೇಶಗಳ ನಡುವೆ ಪರಸ್ಪರ ಸಹಕಾರ ಸಂಬಂಧ ಬಲಪಡಿಸುವ ಅಂಗವಾಗಿ ಯುದ್ಧಹಡಗುಗಳು ಜಿದ್ದಾಕ್ಕೆ ಭೇಟಿ ನೀಡಿವೆ ಎಂದು ಧೂತವಾಸ ಅಧಿಕೃತವಾಗಿ ತಿಳಿಸಿದೆ.





