ಯುವ ಕಾಂಗ್ರೆಸ್ ಚುನಾವಣೆ: ಬೆಳ್ತಂಗಡಿಯಲ್ಲಿ ಅಭಿನಂದನ್ ಹರೀಶ್ ಕುಮಾರ್ ಜಯ

ಬೆಳ್ತಂಗಡಿ, ಮೇ 18: ಬೆಳ್ತಂಗಡಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಭಿನಂದನ್ ಹರೀಶ್ ಕುಮಾರ್ 196 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
4 ಮಂದಿ ಅಭ್ಯರ್ಥಿಗಳು ಚುಣಾವಣೆಗೆ ಸ್ಪರ್ಧಿಸಿದ್ದು ಯುವ ಕಾಂಗ್ರೆಸ್ ತಾ. ಕಾರ್ಯಾಧ್ಯಕ್ಷರಾಗಿದ್ದ ಅಭಿನಂದನ್ ಹರೀಶ್ ಕುಮಾರ್, ಕುವೆಟ್ಟು ಗ್ರಾಪಂ ಮಾಜಿ ಸದಸ್ಯ ಸಲೀಂ ಗುರುವಾಯನಕೆರೆ, ಕಕ್ಕಿಂಜೆಯ ಶಕೀಲ್ ಅರೆಕ್ಕಲ್ ಹಾಗೂ ರಿಯಾಝ್ ಕುದ್ರಡ್ಕ ಸ್ಪರ್ಧಿ ಸಿದ್ದರು.
ಇಂದು ಮತ ಎಣಿಕೆ ನಡೆದಿದ್ದು ಸಲೀಂ ಗುರುವಾಯನಕೆರೆ 136, ರಿಯಾಝ್ ಕುದ್ರಡ್ಕ 131, ಶಕೀಲ್ ಅರೆಕ್ಕಲ್ 13 ಮತ ಪಡೆದಿದ್ದು, 34 ಮತಗಳು ತಿರಸ್ಕೃತಗೊಂಡವು.
ಓರ್ವ ಮತದಾರನಿಗೆ 5 ಮತಗಳನ್ನು ಚಲಾಯಿಸುಬಹುದಾಗಿತ್ತು. ಈ ಪೈಕಿ ಒಂದು ಮತ ತಾಲೂಕು ಅಧ್ಯಕ್ಷ ಅಭ್ಯರ್ಥಿಗೆ, 2 ಮತಗಳು ಜಿಲ್ಲಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗೆ ಹಾಗೂ ಇನ್ನೆರಡು ಮತಗಳು ರಾಜ್ಯಾಧ್ಯಕ್ಷ, ಕಾರ್ಯದರ್ಶಿಗೆ ಚಲಾಯಿಸಲಾಗಿತ್ತು. ಚುನಾವಣಾಧಿಕಾರಿಯಾಗಿ ಉತ್ತರ ಪ್ರದೇಶದ ಕೆ.ಪಿ. ಸಿಂಗ್ ಕಾರ್ಯ ನಿರ್ವಹಿಸಿದ್ದರು.





