ಅಂಗಡಿಯೊಂದರಲ್ಲಿ 45 ಕೋಟಿ ಮೊತ್ತದ ಅಮಾನ್ಯ ನೋಟುಗಳು ಪತ್ತೆ!

ಚೆನ್ನೈ, ಮೇ 18: ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 45 ಕೋಟಿ ಮೊತ್ತದ ಅಮಾನ್ಯಗೊಂಡ ನೋಟುಗಳನ್ನು ವಶಪಡಿಸಿಕೊಂಡ ಘಟನೆ ತಮಿಳುನಾಡಿನ ಕೋಡಂಬಕ್ಕಂನ ಝಕರಿಯಾ ಕಾಲನಿಯಲ್ಲಿ ನಡೆದಿದೆ.
ಅಂಗಡಿಯೊಂದರಿಂದ ಈ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಓರ್ವ ವಕೀಲ ಹಾಗೂ ಉದ್ಯಮಿಗೆ ಸೇರಿದ್ದಾಗಿದೆ ಎನ್ನಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಎಸಿಪಿ ನೇತೃತ್ವದ ಪೊಲೀಸರ ತಂಡ ದಂಡಪಾಣಿ(50) ಎಂಬವರ ಮನೆ ಹಾಗೂ ಅಂಗಡಿಯ ಮೇಲೆ ದಾಳಿ ನಡೆಸಿತ್ತು.
ಕೋಡಂಬಕ್ಕಂ ಠಾಣೆಗೆ ದಂಡಪಾಣಿಯನ್ನು ಕರೆದೊಯ್ದು ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿದ್ದು, ಬೇರೊಬ್ಬ ವ್ಯಕ್ತಿ ಸುರಕ್ಷಿತವಾಗಿ ಇಡಲು ತನ್ನಲ್ಲಿ ಈ ನೋಟುಗಳನ್ನು ನೀಡಿದ್ದ ಎಂದು ಆತ ಬಾಯ್ಬಿಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
Next Story





