ಕಲಾಭವನ್ ಮಣಿ ಸಾವಿನ ಬಗ್ಗೆ ತನಿಖೆ ನಡೆಸಲು ಸಿಬಿಐ ನಿರ್ಧಾರ

ತ್ರಿಶ್ಶೂರ್, ಮೇ 18: ಕೇರಳ ಹೈಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ ಬಹುಭಾಷಾ ನಟ ಕಲಾಭವನ್ ಮಣಿಯವರ ನಿಗೂಢ ಸಾವಿನ ತನಿಖೆಯನ್ನು ನಡೆಸಲು ಸಿಬಿಐ ನಿರ್ಧರಿಸಿದೆ.
ಈ ಮೊದಲು ಪ್ರಕರಣದ ತನಿಖೆ ನಡೆಸುತ್ತಿದ್ದ ಚಾಲಕುಡ್ಡಿ ಸರ್ಕಲ್ ಇನ್ಸ್ ಪೆಕ್ಟರ್ ವಿವರಗಳನ್ನು ಸಿಬಿಐಗೆ ಹಸ್ತಾಂತರಿಸಿದ್ದಾರೆ. ಮಣಿ ಸಾವಿನ ಬಗ್ಗೆ ಅನುಮಾನಗಳಿವೆ ಎಂದು ಮಣಿಯವರ ಪತ್ನಿ ನಿಮ್ಮಿ ಹಾಗೂ ಸಹೋದರ ರಾಮಕೃಷ್ಣನ್ ಹೈಕೋರ್ಟ್ ಗೆ ದೂರು ಸಲ್ಲಿಸಿ, ಸಿಬಿಐ ತನಿಖೆಗೆ ಆಗ್ರಹಿಸಿದ್ದರು.
2016ರ ಮಾರ್ಚ್ 6ರಂದು ಅಸ್ವಸ್ಥಗೊಂಡಿದ್ದ ಮಣಿಯವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗಿ 2 ದಿನಗಳ ನಂತರ ಅವರು ಕೊನೆಯುಸಿರೆಳೆದಿದ್ದರು. ಮಣಿಯವರ ದೇಹದಲ್ಲಿ ಎರಡು ವಿಭಿನ್ನ ವಿಷಕಾರಿ ಅಂಶಗಳಿರುವುದು ತಿಳಿದುಬಂದಿತ್ತು,
Next Story





