ಜಾಂಟಿ ರೋಡ್ಸ್ ಪುತ್ರಿ ‘ಇಂಡಿಯಾ’ ಭಾರತದ ಯಾವ ಕ್ರಿಕೆಟಿಗನ ಅಭಿಮಾನಿ ಗೊತ್ತೇ?

ಹೊಸದಿಲ್ಲಿ, ಮೇ 18: ಪ್ರಸಿದ್ಧ ಕ್ರಿಕೆಟಿಗ, ಅದ್ಭುತ ಫೀಲ್ಡರ್ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ?. ತಮ್ಮ ವಿಶಿಷ್ಟ ಶೈಲಿಯ ಕ್ಷೇತ್ರ ರಕ್ಷಣೆ ಹಾಗೂ ಅದ್ಭುತ ಕ್ಯಾಚ್ ಗಳ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನಗೆದ್ದ ಈ ಕ್ರಿಕೆಟಿಗನ ಪುಟಾಣಿ ಪುತ್ರಿ ಮಾತ್ರ ಭಾರತೀಯ ಕ್ರಿಕೆಟಿಗನ ಅಭಿಮಾನಿಯಂತೆ. ಅವರು ಬೇರ್ಯಾರೂ ಅಲ್ಲ. ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ.
ಸ್ವತಃ ಈ ಬಗ್ಗೆ ಜಾಂಟಿ ರೋಡ್ಸ್ ಅವರೇ ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿಯವರ ಚಿತ್ರವಿರುವ ಪೋಸ್ಟರ್ ಬಳಿ ತಮ್ಮ ಪುತ್ರಿ ಇಂಡಿಯಾ ರೋಡ್ಸ್ ನಿಂತಿರುವ ಫೋಟೊ ಪೋಸ್ಟ್ ಮಾಡಿರುವ ಅವರು, “ವಿರಾಟ್ ಕೊಹ್ಲಿಯವರಿಗೆ ಮತ್ತೊಬ್ಬ ಅಭಿಮಾನಿಯಿದ್ದಾರೆ ಎಂದು ತೋರುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಕೊಹ್ಲಿ, ಅತಿಯಾದ ಮುದ್ದುತನ! ಆ ಚಿಕ್ಕ ಬ್ಯಾಗ್ ನಲ್ಲಿ ಆಕೆಯೇನು ಹೊತ್ತಿದ್ದಾಳೆ” ಎಂದಿದ್ದಾರೆ. ಸದ್ಯ ಟ್ಟಿಟ್ಟರ್ ಕ್ರಿಕೆಟ್ ಅಭಿಮಾನಿಗಳ ಸದ್ಯದ ಹಾಟ್ ಟಾಪಿಕ್ ಇಬ್ಬರು ಕ್ರಿಕೆಟ್ ಸ್ಟಾರ್ ಗಳ ಟ್ವೀಟ್ ಗಳಾಗಿದೆ.






