ಎಎಸ್‌ಐ, ಸಿಬ್ಬಂದಿ ಅಮಾನತು
ದಾವಣಗೆರೆ, ಮೇ 18: ರಸೀದಿ ನೀಡದೇ ಸಾರ್ವಜನಿಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಎಸ್‌ಐ ಮತ್ತು ಸಿಬ್ಬಂದಿಯನ್ನು ಪೂರ್ವ ವಲಯ ಐಜಿಪಿ ಡಾ. ಎಂ.ಎ. ಸಲೀಂ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ದಾವಣಗೆರೆ ದಕ್ಷಿಣ ಸಂಚಾರಿ ಠಾಣೆ ಎಎಸ್‌ಐ ತ್ಯಾಗರಾಜ್, ಸಿಪಿಸಿಗಳಾದ ಜುನೇದ್ ಬಾಷ, ರಹಮತುಲ್ಲಾ, ದೇವರಾಜ್ ಹಾಗೂ ಇಂಟರ್‌ಸೆಪ್ಟರ್ ವಾಹನದ ಚಾಲಕ ಲೋಕೇಶ್ ಅಮಾನತುಗೊಂಡ ಸಿಬ್ಬಂದಿಗಳು ಎಂದು ಗುರುತಿಸಲಾಗಿದೆ.
ಅವರು ವಾಹನ ಚಲಾಯಿಸುವವರ ಬಳಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪೂರ್ವ ವಲಯ ಕಚೇರಿಯ ಡಿವೈಎಸ್‌ಪಿ. ವಿಜಯ್‌ಕುಮಾರ್ ಎಂ. ಸಂತೋಷ್ ಈ ಬಗ್ಗೆ ಪರಿಶೀಲಿಸಿ ವರದಿ ನೀಡಿದ್ದು, ವರದಿ ಆಧರಿಸಿ ಅಮಾನತುಗೊಳಿಸಿದೆ ಎಂದು ಪ್ರಕಟನೆಗೆ ತಿಳಿಸಿದ್ದಾರೆ.
Next Story





