ವಿಟ್ಲ : ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಹುಟ್ಟು ಹಬ್ಬ ಆಚರಣೆ

ವಿಟ್ಲ, ಮೇ 18: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಹುಟ್ಟು ಹಬ್ಬವನ್ನು ವಿಟ್ಲ ಘಟಕದ ಜೆಡಿಎಸ್ ವತಿಯಿಂದ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ಸಸಿ ನೆಡುವ ಮೂಲಕ ವಿಟ್ಲದಲ್ಲಿ ಆಚರಿಸಲಾಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಡರೋಗಿಗಳಿಗೆ ಹಣ್ಣುಹಂಪಲು ವಿತರಿಸಿ, ಆಸ್ಪತ್ರೆ ವಠಾರದಲ್ಲಿ ಸಸಿಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜೆಡಿಎಸ್ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಕೈಲಾಸ್ ಗೌಡ, ಪ್ರಧಾನ ಕಾರ್ಯದರ್ಶಿ ವಿಕ್ಟರ್ ಗೋನ್ಸಾಲ್ವಿಸ್, ಪಕ್ಷ ಪ್ರಮುಖರಾದ ಅಬ್ದುಲ್ಲ ಕೆದುವಡ್ಕ, ವಿನೋದ್ ಕೆ. ಪುತ್ತೂರು, ಬಿ.ಎಲ್. ಚಂದ್ರಶೇಖರ, ಚೇತನ್ ಕುಮಾರ್, ಅಶ್ರಫ್ ಮಹಮ್ಮದ್ ಪೊನ್ನೋಟ್ಟು, ಮಹಮ್ಮದ್ ಕನ್ಯಾನ, ವಿ.ಎಸ್. ಇಬ್ರಾಹಿಂ ಒಕ್ಕೆತ್ತೂರು, ಜಾಫರ್ ಖಾನ್ ವಿಟ್ಲ, ಹರೀಶ್ ಕೊಟ್ಟಾರಿ ವಿಟ್ಲ, ಅಬ್ದುಲ್ ಅಝೀರ್ ಕೊಳಂಬೆ, ಫೆಲಿಕ್ಸ್ ಪಾಯಸ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
Next Story





