ಚಿರತೆ ದಾಳಿಗೆ ಎಮ್ಮೆ ಬಲಿ
ಕೆ.ಆರ್. ಪೇಟೆ, ಮೇ 18: ತೇಗನಹಳ್ಳಿ ಗ್ರಾಮದ ಹೊರವಲಯ ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ ಎಮ್ಮೆಯನ್ನು ಚಿರತೆ ತಿಂದು ಹಾಕಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಮಂಜು ಅವರಿಗೆ ಸೇರಿದ ಎಮ್ಮೆ ಚಿರತೆ ದಾಳಿಗೆ ಬಲಿಯಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ವಲಯ ಅರಣ್ಯಾಧಿಕಾರಿ ರವೀಂದ್ರ ಮತ್ತು ಸಿಬ್ಬಂದಿ, ಚಿರತೆ ಸೆರೆಗೆ ಕ್ರಮ ವಹಿಸುವುದಾಗಿ ಹೇಳಿದರು.
ತೇಗನಹಳ್ಳಿ, ಕುಂದನಹಳ್ಳಿ, ಪುರ, ಕುಂದನಹಳ್ಳಿ, ಹೆಗ್ಗಡಹಳ್ಳಿ, ಕೋಮನಹಳ್ಳಿ, ಗಂಗನಹಳ್ಳಿ ಸುತ್ತಮುತ್ತ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸುತ್ತಿದ್ದು, ಚಿರತೆ ದಾಳಿ ತಪ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
Next Story





