ಮೇ 19ರಿಂದ ದೇರಳಕಟ್ಟೆಯಲ್ಲಿ ಮಜ್ಲಿಸುನ್ನೂರು ಕಾರ್ಯಕ್ರಮ

ಉಳ್ಳಾಲ, ಮೇ 18: ಬದ್ರಿಯಾ ಕೇಂದ್ರ ಜುಮಾ ಮಸೀದಿ ಹಾಗೂ ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ಜಂಟಿ ಅಶ್ರಯದಲ್ಲಿ ಮಜ್ಲಿಸುನ್ನೂರು ಹಾಗೂ ಶಂಸುಲ್ ಉಲಮಾ ಮೌಲಿದ್ ವಾರ್ಷಿಕದ ಪ್ರಯುಕ್ತ 2 ದಿನಗಳ ಧಾರ್ಮಿಕ ಪ್ರಭಾಷಣ ಮೇ 19, 20ರಂದು ರಾತ್ರಿ 8.30ಕ್ಕೆ ದೇರಳಕಟ್ಟೆ ಬದ್ರಿಯಾ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಮೇ 19ರಂದು ಯು.ಕೆ. ಮುಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಮತ್ತು ಮೇ 20ರಂದು ಅಬೂಬಕರ್ ಸಿದ್ದೀಕ್ ಅಝ್ಹರಿ ಮಯ್ಯನ್ನೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಅಸ್ಸಯ್ಯದ್ ಹಾರಿಸ್ ಅಲಿ ಶಿಹಾಬ್ ತಂಙಳ್, ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಸೈಯದ್ ಅಲ್-ಹಾದಿ ತಂಙಳ್ ಮೊಗ್ರಾಲ್, ಅಸೈಯದ್ ತ್ವಾಹಾ ಜಿಫ್ರಿ ತಂಙಳ್ ಅಡ್ಯಾರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖಾಧ್ಯಕ್ಷ ನೌಫಲ್ ಬಿ.ದೇರಳಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





