ಈ ವ್ಯಕ್ತಿಯ ಶರೀರದಲ್ಲಿ 75 ಪಿನ್‌ಗಳು !

ಜೈಪುರ, ಮೇ 19: ರಾಜಸ್ಥಾನದ ಬದ್ರಿಲಾಲ್ ಮೀನಾರ ದೇಹದಲ್ಲಿ 75 ಪಿನ್‌ಗಳು ಪತ್ತೆಯಾಗಿವೆ. 56ವರ್ಷ ವಯಸ್ಸಿನ ಬದ್ರಿಲಾಲ್‌ರನ್ನು ಪಿನ್‌ಗಳಿಂದ ಸೃಷ್ಟಿಸಿದ ಮನುಷ್ಯ ಎನ್ನಬಹುದು. ಕೊರಳು, ಕೈ,ಕಾಲುಗಳು ಹೀಗೆ ದೇಹದಲ್ಲಿ ಚರ್ಮದ ಎಡೆಯಲ್ಲಿ ಪಿನ್‌ಗಳು ಸೇರಿಕೊಂಡಿವೆ.

ಒಂದು ಇಂಚು ಉದ್ದದ ಪಿನ್‌ಗಳು ಶರೀರಕ್ಕೆ ಹೇಗೆ ಹೊಕ್ಕಿವೆ ಎನ್ನುವುದು ಯಾರಿಗೂ ಗೊತ್ತಾಗಿಲ್ಲ. ಈ ಬಗ್ಗೆ ವೈದ್ಯರು ಕೂಡಾ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಪಿನ್‌ಗಳನ್ನು ದೇಹಕ್ಕೆ ಚುಚ್ಚಿದ ಗಾಯಗುರುತುಗಳು ದೇಹದಲ್ಲಿಲ್ಲ. ಇನ್ನು ಪಿನ್‌ನ್ನು ಮೀನಾ ನುಂಗಿಲ್ಲ ಎಂದು ಸ್ವತಃ ವೈದ್ಯರೇ ಹೇಳುತ್ತಿದ್ದಾರೆ.
ಹೊಟ್ಟೆ, ಆಮಾಶಯ ಸಣ್ಣಕರುಳುಗಳಲ್ಲಿ ಎಲ್ಲಿಯೂ ಪಿನ್‌ಗಳು ಪತ್ತೆಯಾಗಿಲ್ಲ ಆದ್ದರಿಂದ ಪಿನ್‌ನ್ನು ನುಂಗಿಲ್ಲ ಎಂದುವೈದ್ಯರು ದೃಢವಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ಮತ್ತೆ ಹೇಗೆ ಪಿನ್‌ಗಳು ವ್ಯಕ್ತಿಯ ದೇಹಕ್ಕೆ ನುಸುಳಿತು ಎನ್ನುವುದು ವೈದ್ಯರಿಗೂ ಬಿಡಿಸಲಾಗದ ಕಗ್ಗಂಟಾಗಿದೆ.
ರೈಲ್ವೆಉದ್ಯೋಗಿಯಾದ ಬದ್ರಿಲಾಲ್‌ರಿಗೂ ಈ ಪಿನ್‌ಗಳು ತನ್ನ ದೇಹಕ್ಕೆ ಹೇಗೆ ಸೇರಿಕೊಂಡಿವೆ ಎನ್ನುವುದು ಗೊತ್ತಾಗಿಲ್ಲ.
ಬಲಕಾಲು ನೋಯುತ್ತಿದೆ ಎಂದು ಖಾಸಗಿಆಸ್ಪತ್ರೆಗೆ ಭೇಟಿ ನೀಡಿದ ಬದ್ರಿಲಾಲ್‌ರನ್ನು ಸ್ಕ್ಯಾನಿಂಗ್‌ಗೆ ಗುರಿಪಡಿಸಿದಾಗ ಈಪಿನ್‌ಗಳು ಅವರ ದೇಹದಲ್ಲಿರುವುದು ಗೊತ್ತಾಗಿದೆ. ಬದ್ರಿಲಾಲ್ ಮಧುಮೇಹ ರೋಗದಿಂದ ಕೂಡಾ ಬಳಲುತ್ತಿದ್ದಾರೆ.







