ಆರೆಸ್ಸೆಸ್ ಕಾರ್ಯಕರ್ತನ ಕೊಲೆಪ್ರಕರಣ: ಇನ್ನಿಬ್ಬರ ಬಂಧನ

ಪಯ್ಯನ್ನೂರ್,ಮೇ 19: ಕಣ್ಣೂರಿನ ಆರೆಸ್ಸೆಸ್ ಕಾರ್ಯಕರ್ತ ರಾಮಂತಳಿಯ ಬಿಜು ಕೊಲೆಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಮಂತಳಿಯ ಸತ್ಯನ್, ಜಿತಿನ್ ಎನ್ನುವವರು ಪೊಲೀಸರು ಸೆರೆಹಿಡಿದಿರುವ ಕೊಲೆ ಆರೋಪಿಗಳು.
ಅಡಗಿಕೂತಿದ್ದ ಇವರನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೋನ್ ಕರೆಗಳನ್ನು ಹಿಂಬಾಲಿಸಿ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ. ಬಿಜು ಕೊಲೆ ಪ್ರಕರಣದಲ್ಲಿ ಈವರೆಗೆ ನಾಲ್ಕುಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಕೃತ್ಯದಲ್ಲಿ ಒಟ್ಟು ಏಳು ಆರೋಪಿಗಳು ಶಾಮೀಲಾಗಿದ್ದು , ಮುಖ್ಯ ಆರೋಪಿ ಅನೂಪ್ ಸಹಿತ ಉಳಿದ ಮೂವರನ್ನು ಇನ್ನಷ್ಟೇ ಪೊಲೀಸರು ಬಂಧಿಸಬೇಕಿದೆ.
Next Story





