Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಅರಬ್ ಜಗತ್ತಿನ ಟಾಪ್ 50 ಭಾರತೀಯ...

ಅರಬ್ ಜಗತ್ತಿನ ಟಾಪ್ 50 ಭಾರತೀಯ ಎಕ್ಸಿಕ್ಯೂಟಿವ್ ಗಳ ಪಟ್ಟಿಯಲ್ಲಿ ಭಟ್ಕಳದ ಮುಶ್ತಾಖ್ ಮಸೂದ್

ವಾರ್ತಾಭಾರತಿವಾರ್ತಾಭಾರತಿ19 May 2017 4:41 PM IST
share
ಅರಬ್ ಜಗತ್ತಿನ ಟಾಪ್ 50 ಭಾರತೀಯ ಎಕ್ಸಿಕ್ಯೂಟಿವ್ ಗಳ ಪಟ್ಟಿಯಲ್ಲಿ ಭಟ್ಕಳದ ಮುಶ್ತಾಖ್ ಮಸೂದ್

ಭಟ್ಕಳ, ಮೇ 19: ಭಟ್ಕಳದ ಸುಪುತ್ರನೊಬ್ಬ ಅರಬ್ ಜಗತ್ತಿನ ಪ್ರಸಿದ್ಧ ಟಾಪ್ 50 ಭಾರತೀಯ ಎಕ್ಸಿಕ್ಯೂಟಿವ್ ಗಳ ಸಾಲಿನಲ್ಲಿ 42ನೆ ಸ್ಥಾನ ಪಡೆದಿದ್ದು, ಭಟ್ಕಳ ಹಾಗೂ ಕರ್ನಾಟಕದ ಪಾಲಿಗೆ ಸಂತಸದ ವಿಷಯವಾಗಿದೆ.

ಭಟ್ಕಳದ ಖ್ಯಾತ ಮೌಲಾನ ಕುಟುಂಬದ ಎಸ್.ಎಂ.ಸೈಯದ್ ಮುಶ್ತಾಖ್ ಮಸೂದ್ ಮಧ್ಯಪ್ರಾಚ್ಯದ ಫೋರ್ಬ್ಸ್ ನಿಯತಕಾಲಿಕ ಪ್ರಕಟಿಸಿದ ಟಾಪ್ 50 ಭಾರತೀಯ ಎಕ್ಸಿಕ್ಯೂಟಿವ್ ಗಳ ಯಾದಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಭಟ್ಕಳಿಗರ ಹೆಸರನ್ನು ಜಾಗತಿಕ ಭೂಪಟದಲ್ಲಿ ಮಿಂಚುವಂತೆ ಮಾಡಿದ್ದಾರೆ.   ಭಟ್ಕಳದ ಮೌಲಾನ ಲುಂಗಿ ಜಗತ್ತಿನಲ್ಲೇ ಹೆಸರು ಮಾಡಿದೆ. ಈಗ ಅದೇ ಕುಟುಂಬದ ಸದಸ್ಯನೊಬ್ಬ ತನ್ನ ಅಗಾಧ ಪ್ರತಿಭೆಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಿಂಚಿದ್ದಾರೆ. ಮೌಲಾನ ಲುಂಗೀಸ್ ನ ನಿರ್ದೇಶಕ ಹಾಗೂ ಮೀಟಾಲೆಕ್ಸ್ ಎಜೆನ್ಸೀಸ್ ಎರ್ನಾಕುಲಂ ನ ಭಾಗೀದಾರ ಎಸ್.ಎಂ.ಸೈಯದ್ ಮಸೂದ್ ರ ಪುತ್ರರಾಗಿರುವ ಮುಶ್ತಾಖ್ ಮಸೂದ್ ದುಬೈ ಇನ್ವೆಸ್ಟ್ಮೆಂಟ್ ಗ್ರೂಪ್ ಪಿ.ಜೆ.ಎಸ್.ಸಿ. ಯ ಸಿಎಫ್‌ಒ (ಚೀಫ್ ಫೈನಾನ್ಸ್ ಆಫಿಸರ್) ಹುದ್ದೆಯಲ್ಲಿದ್ದಾರೆ.

ಇವರು ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ದುಬೈ ಇನ್ವೆಸ್ಟ್ಮೆಂಟ್ ಪಿಜೆಎಸ್ಸಿ ಕಂಪಿನಿಯ ಗ್ರೂಪ್ ಸಿ.ಎಫ್.ಒ. ಆಗಿರುವ ಇವರು ಹಣಕಾಸು ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನು ಮಾಡಿದ್ದಾರೆ. ಫೈನಾನ್ಶಿಯಲ್, ಇಂಡಸ್ಟ್ರಿಯಲ್ ಮತ್ತು ರಿಯಲ್ ಎಸ್ಟೇಟ್ ನಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಈ ಕಂಪನಿಯ ಸಂಪೂರ್ಣ ಹಣಕಾಸು ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಇವರು, ತಮ್ಮ ಪ್ರತಿಭೆಯಿಂದಾಗಿ ಕಂಪನಿಯನ್ನು ಉತ್ತುಂಗಕ್ಕೇರುವಂತೆ ಮಾಡಿದ್ದಾರೆ. ಇದರ ಉಪಸಂಸ್ಥೆಗಳಾದ ಅಲ್ ಮಾಲ್ ಕ್ಯಾಪಿಟಲ್ ಪಿಎಸ್ಸಿ ಇದರ ಬೋರ್ಡ್ ಆಫ್ ಡೈರಕ್ಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಸೈಯದ್ ಮುಶ್ತಾಖ್ ಕೇರಳದ ಎರ್ನಾಕುಲಂ ನ ಸೆಂಟ್ ಅಲ್ಬರ್ಟ್ ಕಾಲೇಜಿನಿಂದ ವಾಣಿಜ್ಯ ಪದವಿಯನ್ನು ಪಡೆದು 1989ರಲ್ಲಿ ಸಿ.ಎ. ಪದವಿಯನ್ನು ಪೂರ್ಣಗೊಳಿಸಿದರು. ನಂತರ ದುಬೈಗೆ ಉದ್ಯೋಗ ಅರಸಿ ಬಂದ ಇವರು, ಅಲ್ಲಿ ಆರ್ಥರ್ ಯಂಗ್ ಮತ್ತು ಆರ್ಥರ್ ಅಂಡ್ರಸೆನ್ ಕಂಪನಿಯಲ್ಲಿ ಆಡಿಟರ್ ಆಗಿ ನೇಮಕಗೊಂಡರು.

1992 ರಲ್ಲಿ ಅಬುಧಾಬಿಗೆ ಸ್ಥಳಾಂತರಗೊಂಡು ಅಲ್ಲಿನ ಪ್ರಸಿದ್ಧ ಪೆಟ್ರೋಲಿಯಂ ಕಂಪನಿ ಅಡ್ನೋಕ್ ಡಿಸ್ಟ್ರಿಬ್ಯೂಶನ್ ನಲ್ಲಿ ಆಂತರಿಕ ಆಡಿಟರ್ ಹುದ್ದೆಯನ್ನು ನಿರ್ವಹಿಸಿದರು. 1999 ರಲ್ಲಿ ಸೈಯದ್ ಮುಶ್ತಾಖ್ ಕುಪೋಲಾ ಗ್ರೂಪ್ ಸೇರಿ ಅಡಿಟಿಂಗ್ ನಿಂದ ಫೈನಾನ್ಸ್ ವಿಭಾಗದಲ್ಲಿ ತಮ್ಮ ಪ್ರಯಾಣವನ್ನು ಬೆಳೆಸಿದರು. ನಂತರ ಮಿಡ್ಲ್ ಈಸ್ಟ್ ಮತ್ತು ನಾರ್ತ್ ಆಫ್ರಿಕಾ (ಮೀನಾ) ದಲ್ಲಿ ಅಬರಾರ್ ಕ್ಯಾಪಿಟಲ್ ನೊಂದಿಗೆ ಗುರುತಿಸಿಕೊಂಡರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X