ಮೇ 20-21: ಬ್ರಹ್ಮಕಲಶೋತ್ಸವ
ಮಂಗಳೂರು, ಮೇ 19: ಮಾಲೇಮಾರುವಿನ ಮಹಿಷಂದಾಯ ಧೂಮಾವತಿ ಬಂಟ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಧರ್ಮ ದೈವಗಳ ನೇಮ ಮತ್ತು ಬಂಡಿ ಉತ್ಸವವು ಮೇ 20ರಿಂದ 21ರವರೆಗೆ ಜರಗಲಿದೆ ಎಂದು ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ 20ರಂದು ಸಂಜೆ 6 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಶಿಲ್ಪಿಯವರಿಂದ ಆಲಯ ಪರಿಗ್ರಹ, ಮುಹೂರ್ತ ಪ್ರಸಾದ ಶುದ್ಧಿ, ವಾಸ್ತುಪೂಜೆ ಜರಗಲಿದೆ. ಮೇ 21ರಂದು ಬೆಳಗ್ಗೆ 8 ಗಂಟೆಗೆ ಗಣಹೋಮ ಸಾನಿಧ್ಯ ಕಲಶ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ದೇರೆಬೈಲ್ ವಿಠಲದಾಸ್ ತಂತ್ರಿಯವರ ನೇರ್ತತ್ವದಲ್ಲಿ ದೈವಸ್ಥಾನಗಳ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಜರಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ, ಬೊಲ್ಯಗುತ್ತು ಎಂ.ವಿನೋದ್ ಶೆಟ್ಟಿ ಕೊಟ್ಟಾರ, ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್ ಉಪಸ್ಥಿತರಿದ್ದರು.
Next Story





