ತೀವ್ರಗೊಂಡ ಬಿಸಿಲು: ತೆಲಂಗಾಣದಲ್ಲಿ 167 ಮಂದಿ ಮೃತ್ಯು?

ಹೈದರಾಬಾದ್, ಮೇ 19: ಬಿಸಿಲಿನ ತೀವ್ರತೆಗೆ ತೆಲಂಗಾಣದಲ್ಲಿ ಎಪ್ರಿಲ್ 1ರಿಂದ ಸುಮಾರು 167 ಜನರು ಮೃತಪಟ್ಟಿರುವುದಾಗಿ ರಾಜ್ಯ ವಿಕೋಪ ನಿರ್ವಹಣಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“ಈ ಮೃತ್ಯು ಪ್ರಕರಣಗಳು ಬಿಸಿಲಿನ ತೀವ್ರತೆಯಿಂದ ಸಂಭವಿಸಿದ್ದೇ ಎನ್ನುವುದನ್ನು ತಹಶೀಲ್ದಾರ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಾಗೂ ಸಿವಿಲ್ ಸರ್ಜನ್ ರ ಕಮಿಟಿ ತೀರ್ಮಾನಿಸಬೇಕಾಗಿದೆ. ಆನಂತರವೇ ಮೃತರ ಕುಟುಂಬಸ್ಥರಿಗೆ ಪರಿಹಾರ ಒದಗಿಸಲಾಗುವುದು” ಎಂದವರು ಹೇಳಿದ್ದಾರೆ.
ಕೆಲದಿನಗಳಿಂದ ತೆಲಂಗಾಣದಲ್ಲಿ ತಾಪಮಾನ ತೀವ್ರವಾಗಿದ್ದು, ಹಲವು ಪ್ರದೇಶಗಳಲ್ಲಿ 40 ಡಿಗ್ರಿಗಳಿಗಿಂತಲೂ ಹೆಚ್ಚಿವೆ. ಮುಂದಿನ ಐದು ದಿನಗಳಲ್ಲಿ ಕೆಲ ಪ್ರದೇಶಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Next Story





