Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜಿಎಸ್‌ಟಿ: ಸೇವಾ ತೆರಿಗೆ ದರಗಳು ಅಂತಿಮ

ಜಿಎಸ್‌ಟಿ: ಸೇವಾ ತೆರಿಗೆ ದರಗಳು ಅಂತಿಮ

ವಾರ್ತಾಭಾರತಿವಾರ್ತಾಭಾರತಿ19 May 2017 8:27 PM IST
share
ಜಿಎಸ್‌ಟಿ: ಸೇವಾ ತೆರಿಗೆ ದರಗಳು ಅಂತಿಮ

ಶ್ರೀನಗರ,ಮೇ 19: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಶುಕ್ರವಾರ ಸೇವಾ ತೆರಿಗೆಗಳನ್ನು ಅಂತಿಮಗೊಳಿಸಿದೆ. ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಿಗೆ ಜಿಎಸ್‌ಟಿ ವ್ಯವಸ್ಥೆಯಿಂದ ವಿನಾಯಿತಿ ನೀಡಲಾಗಿದೆ.

ನೂತನ ಮಾರಾಟ ತೆರಿಗೆ ವ್ಯವಸ್ಥೆಯಡಿ ದೂರಸಂಪರ್ಕ, ವಿಮೆ, ಹೋಟೆಲ್ ಮತ್ತು ರೆಸ್ಟೋರಂಟ್‌ಗಳು ಸೇರಿದಂತೆ ಸೇವೆಗಳಿಗೆ ಅನ್ವಯಿಸುವ ನಾಲ್ಕು ತೆರಿಗೆ ದರಗಳನ್ನು ಅಂತಿಮಗೊಳಿಸಲಾಗಿದೆ. ಜಿಎಸ್‌ಟಿ ವ್ಯವಸ್ಥೆಯು ಜುಲೈ 1ರಿಂದ ಜಾರಿಗೊಳ್ಳಲಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಇಲ್ಲಿ ಜಿಎಸ್‌ಟಿ ಮಂಡಳಿಯ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಸರಕುಗಳಿಗೆ ಅನ್ವಯಿಸುವ ತೆರಿಗೆ ದರಗಳಿಗೆ ಅನುಗುಣವಾಗಿ ಶೇ.5, ಶೇ.12, ಶೇ.18 ಮತ್ತು ಶೇ.28 ಸೇವಾತೆರಿಗೆಗಳನ್ನು ನಿಗದಿಗೊಳಿಸಲಾಗಿದೆ. ದೂರಸಂಪರ್ಕ ಮತ್ತು ಹಣಕಾಸು ಸೇವೆಗಳಿಗೆ ಶೇ.18ರಷ್ಟು ಮತ್ತು ಸಾರಿಗೆ ಸೇವೆಗಳಿಗೆ ಶೇ.5ರಷ್ಟು ತೆರಿಗೆಯನ್ನು ವಿಧಿಸಲಾಗುವುದು ಎಂದರು.

ಚಿನ್ನದ ಮೇಲೆ ತೆರಿಗೆ ದರವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಮಂಡಳಿಯು ಜೂ.3ರಂದು ಮತ್ತೆ ಸಭೆ ಸೇರಲಿದೆ.

ನೂತನ ತೆರಿಗೆ ದರಗಳು ರೆಸ್ಟೋರಂಟ್ ಭೇಟಿ, ಸಿನಿಮಾ ವೀಕ್ಷಣೆ, ಸಲೂನ್‌ನಿಂದ ಹಿಡಿದು ಫೋನ್ ಬಿಲ್‌ಗಳವರೆಗೆ ಪ್ರತಿಯೊಂದರ ಮೇಲೂ ಪರಿಣಾಮ ಬೀರಲಿವೆ. ರಸ್ತೆ, ರೈಲು ಮತ್ತು ವಿಮಾನ ಸಾರಿಗೆ ಶೇ.5ರ ತೆರಿಗೆ ಹಂತದ ವ್ಯಾಪ್ತಿಯಲ್ಲಿ ಬರಲಿವೆ. ಏಸಿ ಸೌಲಭ್ಯವಿಲ್ಲದ ರೆಸ್ಟೋರಂಟ್‌ಗಳಿಗೆ ಶೇ.12 ಮತ್ತು ಏಸಿ ಸೌಲಭ್ಯ ಹೊಂದಿರುವ ರೆಸ್ಟೋರಂಟ್‌ಗಳಿಗೆ ಶೇ.18 ತೆರಿಗೆಯನ್ನು ವಿಧಿಸಲಾಗುವುದು. 2500 ರೂ-5000 ರೂ.ಶುಲ್ಕ ವಿಧಿಸುವ ಹೋಟೆಲ್‌ಗಳಿಗೆ ಶೇ.18 ಮತ್ತು 5,000 ರೂ.ಗಿಂತ ಹೆಚ್ಚಿನ ಶುಲ್ಕದ ಹೋಟೆಲ್‌ಗಳಿಗೆ ಶೇ.28 ಜಿಎಸ್‌ಟಿ ವಿಧಿಸಲಾಗುವುದು. ಆದರೆ 1,000 ರೂ.ಗಿಂತ ಕಡಿಮೆ ಶುಲ್ಕವಿರುವ ಹೋಟೆಲ್‌ಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.

ಹಾಲಿ ಶೇ.15ರಷ್ಟು ತೆರಿಗೆ ಹೊಂದಿರುವ ಸೇವೆಗಳು ಜು.1ರಿಂದ ಶೇ.18 ತೆರಿಗೆ ವ್ಯಾಪ್ತಿಗೆ ಬರಲಿವೆ. ಆದರೆ ಸೇವೆಗಳಿಗಾಗಿ ಬಳಸಲಾದ ಸರಕುಗಳಿಗಾಗಿ ತೆರಿಗೆ ಕಡಿತ ಸೌಲಭ್ಯವಿರುವುದರಿಂದ ನಿಜವಾದ ತೆರಿಗೆ ಕಡಿಮೆಯಾಗಲಿದೆ ಎಂದು ಮಂಡಳಿಯ ಸದಸ್ಯರಾದ ಕೇರಳ ವಿತ್ತಸಚಿವ ಥಾಮಸ್ ಇಸಾಕ್ ಅವರು ಜಿಎಸ್‌ಟಿ ಮಂಡಳಿ ಸಭೆಯ ಬಳಿಕ ತಿಳಿಸಿದರು. ಐಷಾರಾಮಿ ಸೇವೆಗಳು ಗರಿಷ್ಠ ಶೇ.28 ತೆರಿಗೆ ದರಕ್ಕೊಳ ಪಡುತ್ತವೆ ಎಂದರು.

ಮಂಡಳಿಯು ಗುರುವಾರ 1,211 ಸರಕುಗಳ ತೆರಿಗೆ ದರಗಳಿಗೆ ಒಪ್ಪಿಗೆ ನೀಡಿತ್ತು. ಈ ಪೈಕಿ ಶೇ.5ರಷ್ಟು ಸರಕುಗಳಿಗೆ ವಿನಾಯಿತಿ ಲಭಿಸಿದ್ದರೆ, ಶೇ.14ರಷ್ಟು ಸರಕುಗಳು ಶೇ.5, ಶೇ.17ರಷ್ಟು ಸರಕುಗಳು ಶೇ.12, ಶೇ.43ರಷ್ಟು ಸರಕುಗಳು ಶೇ.18 ಮತ್ತು ಶೇ.19ರಷ್ಟು ಸರಕುಗಳು ಗರಿಷ್ಠ ಶೇ.28 ತೆರಿಗೆಯನ್ನು ಆಕರ್ಷಿಸಲಿವೆ.

ದೂರಸಂಪರ್ಕ ಸೇವೆಗಳಿಗೆ ಈಗಿನ ತೆರಿಗೆ ದರಗಳೇ ಮುಂದುವರಿಯಲಿವೆ ಎಂದು ಇಸಾಕ್ ತಿಳಿಸಿದರು.

ಒಟ್ಟಾರೆಯಾಗಿ ಶೇ.81ರಷ್ಟು ಸರಕುಗಳು ಶೇ.18 ಅಥವಾ ಕಡಿಮೆ ತೆರಿಗೆಯನ್ನು ಆಕರ್ಷಿಸಲಿವೆ ಮತ್ತು ಶೇ.19ರಷ್ಟು ಸರಕುಗಳು ಶೇ.28 ತೆರಿಗೆಗೊಳಪಡುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X