ಜಾನುವಾರು ಕಳವಿಗೆ ಯತ್ನ: ಆರೋಪಿಗಳ ಬಂಧನ
ಹೆಬ್ರಿ, ಮೇ 19: ಬೇಳಂಜೆ ಗ್ರಾಮದ ಸುಭಾಷ್ ನಗರ ಎಂಬಲ್ಲಿ ಜಾನುವಾರುಗಳನ್ನು ಕಳವು ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿ ಗಳನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುಸ್ತಫ (40), ಅಹ್ಮದ್ ಫೈಝಲ್ (39), ಧರ್ಮೇಶ(56), ವೆಂಕಪ್ಪಶೆಟ್ಟಿ(67) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯಂತೆ ಜಾನುವಾರುಗಳನ್ನು ಕಳವು ಮಾಡಲು ಹೋಗುತ್ತಿದ್ದ ಕಾರು ಪೊಲೀಸರನ್ನು ನೋಡಿ ಹಿಂದಕ್ಕೆ ಚಲಾಯಿಸಿಕೊಂಡು ಹೋಗಿ ರಸ್ತೆಯ ಬದಿಯ ಮೋರಿಗೆ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದು, ಇದರಿಂದ ಕಾರು ಜಖಂಗೊಂಡಿದೆ. 10ಲಕ್ಷ ರೂ. ವೌಲ್ಯದ ಕಾರು, ಅದರ ಢಿಕ್ಕಿಯಲ್ಲಿದ್ದ 4 ಹುರಿ ಹಗ್ಗಗಳು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
Next Story





