Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಿಂದೇಟು...

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಿಂದೇಟು ಹಾಕುವ ಪೋಷಕರಿಗೆ ಮೌನೇಶ್ವರಿ ಸ್ಫೂರ್ತಿ

ಹಳ್ಳಿಯ ಪ್ರತಿಭೆಗೆ ಐಎಎಸ್ ಕನಸು

ಕಳಕೇಶ್ ಗೊರವರ, ರಾಜೂರುಕಳಕೇಶ್ ಗೊರವರ, ರಾಜೂರು19 May 2017 10:57 PM IST
share
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಿಂದೇಟು ಹಾಕುವ ಪೋಷಕರಿಗೆ ಮೌನೇಶ್ವರಿ ಸ್ಫೂರ್ತಿ


ಸಿಂಧನೂರು, ಮೇ 19: ಮನೆಯಲ್ಲಿ ಕಾಲು ಮುರಿದು ಬಿದ್ದಿರುವ ಬಡತನದ ನಡುವೆಯೂ ಮೌನೇಶ್ವರಿ ಎಂಬ ವಿದ್ಯಾರ್ಥಿನಿ ಶ್ರದ್ಧೆಯಿಂದ ಓದಿ ಶೇ. 92.6 ಫಲಿತಾಂಶದೊಂದಿಗೆ ಪಿಯು ಕಾಲೇಜಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸೈ ಎನಿಸಿಕೊಂಡಿದ್ದಾಳೆ.

ಈಗಲೂ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಿಂದೇಟು ಹಾಕುವ ಪೋಷಕರಿಗೆ ಈಕೆಯ ಸಾಧನೆ ಸ್ಫೂರ್ತಿದಾಯಕವಾಗಿದೆ. ಮನಸ್ಸಿನಾಳದಲ್ಲಿ ಉನ್ನತ ಶಿಕ್ಷಣ ಪಡೆಯುವ ಆಸೆೆ, ಕನಸಿದ್ದರೂ ಪೋಷಕರ ಒತ್ತಾಯಕ್ಕೆ ಮಣಿದು ಓದು ಅರ್ಧಕ್ಕೆ ಮೊಟಕುಗೊಳಿಸುವ ವಿದ್ಯಾರ್ಥಿನಿಯರಿಗೆ ಅನುಕರಣೀಯಳಾಗಿದ್ದಾಳೆ.

ಸಿಂಧನೂರಿನ ಎಕ್ಸ್‌ಲೆಂಟ್ ಪಿಯು ಕಾಲೇಜಿನ ವಿದಾರ್ಥಿನಿ ಮೌನೇಶ್ವರಿ, ಹಂಚಿನಾಳ ಕ್ಯಾಂಪಿನ ಅಂಜಪ್ಪ ಮತ್ತು ನಾಗಮ್ಮ ದಂಪತಿಯ ಪುತ್ರಿ. ಇಲ್ಲಿನ ಬೆರಳೆಣಿಕೆಯಷ್ಟು ಸಾಕ್ಷರರಲ್ಲಿ ಮೌನೇಶ್ವರಿ  ಕೂಡಾ ಒಬ್ಬಳು. ಅನಕ್ಷರಸ್ಥರಾದ ಅಂಜಪ್ಪ, ತಮ್ಮ ನಾಲ್ಕು ಜನ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮತ್ತು ಹೊಟ್ಟೆ ತುಂಬಿಸಿಕೊಳ್ಳಲು ನೆಚ್ಚಿದ್ದು ಕೇವಲ ದಿನಗೂಲಿಯನ್ನು ಮಾತ್ರ. ಅಂಗೈಯಗಲದಷ್ಟು ಗುಡಿಸಲು ಮನೆ ಇದೆ. ಸ್ವಂತ ಹೊಲ ಇಲ್ಲ. ಪ್ರತಿವರ್ಷ ಕೆಲಸ ಅರಸಿ ಮಂಗಳೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ಗೂಳೆ ಹೋಗುವುದು ಇವರಿಗೆ ಅನಿವಾರ್ಯವಾಗಿದೆ.

ಅಂಜಪ್ಪ, ಈತನ ಹೆಂಡತಿ ನಾಗಮ್ಮ ಮತ್ತು ಪ್ರಸಕ್ತ ಸಾಲಿನಲ್ಲಿ ಎಸೆಸೆಲ್ಸಿ ಮುಗಿಸಿರುವ ಇವರ ಕಿರಿಯ ಮಗನ ಜೊತೆ ಮಂಗಳೂರಿನ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಈಗಲೂ ಕೂಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಕೆಲಸ ನೀಡುವ ಧಣಿಗಾಗಿ ಕಾದು ನಿಲ್ಲುತ್ತಾರೆ. ವಾರದಲ್ಲಿ ಎರಡು, ಮೂರು ದಿನಗಳ ಕಾಲ ಇವರಿಗೆ ಕೆಲಸ ದೊರೆಯುತ್ತದೆ. ದಿನದ ಕೂಲಿ ಕುಟುಂಬದ ಹಸಿವು ನೀಗಿಸಲೂ ಸಾಲದಾಗಿದೆ. ಮಗಳ ಸಾಧನೆಗೆ ಹಿರಿಹಿರಿ ಹಿಗ್ಗುವ ಅಂಜಪ್ಪ, ಅವಳ ಮುಂದಿನ ಓದು ನೆನೆದು ಅಸಹಾಯಕತೆಯ ನಿಟ್ಟುಸಿರು ಬಿಡುತ್ತಾರೆ.

ಸಿಂಧನೂರು ತಾಲೂಕಿನ ಹಂಚಿನಾಳ ಯು. ಕ್ಯಾಂಪ್, ಒಂದಿಷ್ಟೂ ಆಧುನಿಕತೆ ಸೋಕದ, ಮೂಲಭೂತ ಸೌಕರ್ಯಗಳಿಂದ ಮಾರು ದೂರವೇ ಉಳಿದಿದೆ. ಇದನ್ನು ಊರು ಎಂದು ಪರಿಗಣಿಸಲಾಗದಷ್ಟು ಕಡಿಮೆ ಸಂಖ್ಯೆಯ ಗುಡಿಸಲು ಮತ್ತು ಮನೆಗಳಿಂದ ಕೂಡಿದೆ. ಈ ಕ್ಯಾಂಪಲ್ಲಿ ಕೇವಲ 5ನೆ ತರಗತಿಯವರೆಗೆ ಶಾಲೆ ಇದ್ದು, ಇಲ್ಲಿನ ವಿದ್ಯಾರ್ಥಿಗಳು ಪಟ್ಟಣದ ಶಾಲೆ, ಕಾಲೇಜುಗಳಿಗೆ ಪ್ರತಿದಿನ 1 ಕಿ.ಮೀ. ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಇಷ್ಟೆಲ್ಲಾ ಸಮಸ್ಯೆಗಳ ಕೇಂದ್ರವಾಗಿರುವ ಊರಿನಲ್ಲಿ, ಮೌನೇಶ್ವರಿ  ಕಲಾ ವಿಭಾಗದಲ್ಲಿ 600ಕ್ಕೆ 555 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.

ಸಹಾಯ ಹಸ್ತ
ಮೌನೇಶ್ವರಿಗೆ ಉನ್ನತ ಶಿಕ್ಷಣ ಪಡೆದು, ಐಎಎಸ್ ಅಧಿಕಾರಿಯಾಗುವ ಕನಸು. ಇವರ ಹತ್ತಿರ ಬಿಡಿಗಾಸೂ ಇಲ್ಲ. ಉಪಜೀವನ ನಡೆಸುವುದೇ ಕಷ್ಟವಾಗಿದೆ. ಅವಳ ಮುಂದಿನ ಓದಿಗೆ ಸಹೃದಯರಲ್ಲಿ ಹಣ ಸಹಾಯ ಯಾಚಿಸಿದ್ದಾಳೆ. ಖಾತೆ ನಂ.:62289809395, ಐಎಫ್‌ಎಸ್ಸಿ ಕೋಡ್- ಚಿ0021214, ಹಂಚಿನಾಳ, ಹಂಪನಾಳ ಪೊಸ್ಟ್, ಸಿಂಧನೂರು ತಾಲೂಕು, ರಾಯಚೂರು ಜಿಲ್ಲೆ. ಹೆಚ್ಚಿನ ಮಾಹಿತಿಗೆ ದೂ. ಸಂ.:8884990630, 9740356420ನ್ನು ಸಂಪರ್ಕಿಸಬಹುದು.

ಆರ್ಥಿಕ ಪರಾವಲಂಬನೆಯೇ ಇಷ್ಟು ಶತಮಾನ ಮಹಿಳೆಯನ್ನು ಸಂಕೋಲೆ ಯಲ್ಲಿಡಲು ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಆ ಸಂಕೋಲೆಯಿಂದ ಹೊರ ಬರಲು ಮಹಿಳೆಗೆ ಉನ್ನತ ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಮತ್ತು ಸಮಾಜದಲ್ಲಿ ಪುರುಷನಿಗೆ ಸರಿ-ಸಮನಾಗಿ ನಿಲ್ಲಲು ಅಧಿಕಾರದ ಆವಶ್ಯಕತೆಯಿದೆ. ನನ್ನ ಮುಂದಿನ ಓದಿಗೆ ಸಹೃದಯರು ಸಹಾಯ ಹಸ್ತ ನೀಡಿದರೆ, ಐಎಎಸ್ ಅಧಿಕಾರಿಯಾಗುವ ನನ್ನ ಕನಸನ್ನು ನನಸಾಗಿಲು ಶ್ರದ್ಧೆಯಿಂದ ಓದುವೆ.

ಮೌನೇಶ್ವರಿ, ವಿದ್ಯಾರ್ಥಿನಿ

share
ಕಳಕೇಶ್ ಗೊರವರ, ರಾಜೂರು
ಕಳಕೇಶ್ ಗೊರವರ, ರಾಜೂರು
Next Story
X