ವಿದ್ಯುತ್ ತಂತಿ ತಗಲಿ ಕಾರ್ಮಿಕ ಗಂಭೀರ
ಭಟ್ಕಳ, ಮೇ 19: ತಾಲೂಕಿನ ಸುಲ್ತಾನ್ ಸ್ಟ್ರೀಟ್‌ನ ಮನೆಯೊಂದರಲ್ಲಿ ಟೈಲ್ಸ್ ಜೋಡಿಸುತ್ತಿದ್ದ ವೇಳೆ ಕಾರ್ಮಿಕನೋರ್ವನಿಗೆ ವಿದ್ಯುತ್ ಶಾಕ್ ತಗಲಿದ ದಾರುಣ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಸುಲ್ತಾನ್ ಸ್ಟ್ರೀಟ್ ಮನೆಯ ಮೇಲ್ಛಾವಣಿಯಲ್ಲಿ ರಾಜಸ್ತಾನ ಮೂಲದ ಕಾರ್ಮಿಕನೋರ್ವನಿಗೆ ವಿದ್ಯುತ್ ಶಾಕ್ ತಗಲಿದ ಘಟನೆ ನಡೆದಿದ್ದು, ಕೆಲಸದ ವೇಳೆ 12 ಕೆಬಿ ವಿದ್ಯುತ್ ತಂತಿ ಆಕಸ್ಮಿಕವಾಗಿ ಕಾರ್ಮಿಕನ ಎಡಗೈಗೆ ತಗಲಿದೆ.
ಈ ಸಂಧರ್ದಲ್ಲಿ ವ್ಯಕ್ತಿಯ ಎಡಗೈ, ಎರಡೂ ಕಾಲು ಸುಟ್ಟು ಕರಕಲಾಗಿದೆ. ವ್ಯಕ್ತಿಯು ರಾಜಸ್ತಾನದ ಕರಾವಳಿ ಜಿಲ್ಲೆಯ ಮನ್ರೂಪ್ ಕೆವೊಟ್ಟಿ(18) ಎಂದು ತಿಳಿದು ಬಂದಿದ್ದು, ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ. ಒಂದು ಕ್ಷಣಕ್ಕೆ ವಿದ್ಯುತ್ ವ್ಯಕ್ತಿಯ ಮೇಲೆ ಸಂಪೂರ್ಣ ಹರಿದು ತಕ್ಷಣಕ್ಕೆ ತಂತಿಯು ಸುಟ್ಟು ಹೋಗಿದೆ. ವಿದ್ಯುತ್ ತಂತಿ ಸುಟ್ಟು ಹೋಗಿದ್ದರ ಪರಿಣಾಮ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ತಕ್ಷಣಕ್ಕೆ ಅಲ್ಲಿನ ಸ್ಥಳಿಯರು ಕಾರ್ಮಿಕನನ್ನು ಹತ್ತಿರದ ಖಾಸಗಿ ವೇಲ್ಪೇರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.





