ಮೇ 20: ವಳಚ್ಚಿಲ್ ನಲ್ಲಿ ಸಲಫಿ ಸಮಾವೇಶ
ಮಂಗಳೂರು, ಮೇ 19: ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ ಹಮ್ಮಿಕೊಂಡಿರುವ ಕುರ್‍ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್.ಕೆ.ಎಸ್.ಎಮ್.ನ ಫರಂಗಿಪೇಟೆ ಘಟಕದ ವತಿಯಿಂದ ಮೇ 20 ರಂದು ಸಂಜೆ ಗಂಟೆ 4:30 ರಿಂದ 9:30 ರವರೆಗೆ ವಳಚ್ಚಿಲ್ ಬಳಿಯ ಎ.ಆರ್ ಕಾಂಪೌಂಡಿನಲ್ಲಿ ಸಲಫಿ ಸಮಾವೇಶವು ಜರಗಲಿದೆ.
ಅಲಿ ಉಮರ್ ಮತ್ತು ಮೌಲವಿ ನಾಸಿರುದ್ದೀನ್ ರಹ್ಮಾನಿ ಅವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆಂದು ಘಟಕದ ಅಧ್ಯಕ್ಷ ಸಯ್ಯದ್ ಬಾವಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





