ನಾನು ಯಾರು ಎಂದು ನಿಮಗೆ ಗೊತ್ತಿಲ್ಲ: ಜೈಲಿನಲ್ಲಿ ಶಾಸಕನ ದರ್ಪ

ಮುಂಬೈ,ಮೇ 20: ಜೈಲುಪಾಲಾದ ಎನ್ಸಿಪಿ ಶಾಸಕರೊಬ್ಬರು ಪೊಲೀಸಧಿಕಾರಿಯೊಂದಿಗೆ ದರ್ಪ ತೋರಿಸಿದ ಘಟನೆ ಬಹಿರಂಗವಾಗಿದೆ. ಮುಂಬೈ ಬಾಯ್ಕುಲಾದ ಜೈಲಿನ ಹೊರಗೆ ನಿಂತು ಪಿಕಪ್ ವ್ಯಾನ್‌ನ್ನು ಕಾಯುತ್ತಿದ್ದರು. ಆದರೆ ವ್ಯಾನ್ ಬರಲು ತಡವಾದಾಗ ಸಹನೆ ಕಳಕೊಂಡ ಶಾಸಕ ರಮೇಶ್ ಕದಂ ಅಲ್ಲಿದ್ದ ಪೊಲೀಸ್ ಅಧಿಕಾರಿಯೊಡನೆ ಕೆಟ್ಟ ಭಾಷೆಗಳಿಂದ ಮಾತಾಡಿದ್ದಾರೆ. ಈ ಇಡೀ ಘಟನೆ ಗುರುವಾರ ಕ್ಯಾಮರಾದಲ್ಲಿ ದಾಖಲಾಗಿತ್ತು, ಈಗ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ರಮೇಶ್ ಕದಂ ಕಳೆದ 19 ತಿಂಗಳಿಂದ 300 ಕೋಟಿ ರೂ. ಹಗರಣದಲ್ಲಿ ಜೈಲುಪಾಲಾಗಿದ್ದಾರೆ. ಅವರನ್ನು 2015ರಲ್ಲಿ ಬಂಧಿಸಲಾಗಿತ್ತು.
ವೀಡಿಯೊದಲ್ಲಿ ಕಂಡುಬಂಧ ಪೊಲೀಸಧಿಕಾರಿ ಮನೋಜ್ ಪವಾರ್ ಶಾಸಕ ರಮೇಶ್ ಕದಂರ ಕೆಟ್ಟವರ್ತನೆ ವಿರುದ್ಧ ನಾಗಪಾಡ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಹಾಗೂ ಮೇಲಧಿಕಾರಿಗಳಿಗೂ ವರದಿಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿ ಶಾಸಕ ಕದಂ ಪೊಲೀಸಧಿಕಾರಿ ಮನೋಜ್ ಪವಾರ್ ತನ್ನಲ್ಲಿ ಹಣ ಕೇಳಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಪವಾರ್, ಶಾಸಕರು ತಮ್ಮ ನ್ನು ರಕ್ಷಿಸಲು ಕಥೆಕಟ್ಟುತ್ತಿದ್ದಾರೆ ಎಂದಿದ್ದಾರೆ.
ರಮೇಶ್ ಕದಂ ಸರಕಾರದ ಅನ್ನಾಬಾವೂ ಸಾಠೆ ಡೆವಲಪ್‌ಮೆಂಟ್ ಕಾರ್ಪೊರೇಷನ್‌ನ ಅಧ್ಯಕ್ಷ ಆಗಿದ್ದರು. ಇದನ್ನುರಾಜ್ಯದ ಮತಂಗ ಸಮುದಾಯಕ್ಕೆ ಆರ್ಥಿಕ ಸಹಕಾರಕ್ಕಾಗಿ ಸ್ಥಾಪಿಸಲಾಗಿತ್ತು. ಆದರೆ ಕದಂ ತನ್ನನಿಯಂತ್ರಣದ ಕಂಪೆನಿಗಳಿಗೆ ಹಣವನ್ನು ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಮಾರ್ಚ್‌ನಲ್ಲಿ ನ್ಯಾಯಾಲಯವೊಂದು ಕದಂ ಮತ್ತು ಅವರ ಸಹೋದ್ಯೋಗಿಗಳ 135 ಕೋಟಿ ರೂಪಾಯಿ ಆಸ್ತಿಯನ್ನು ಅಟ್ಯಾಚ್ ಮಾಡಲು ಆದೇಶಿಸಿದೆ.







