ಕೇರಳದಲ್ಲಿ ಅಂಚೆ ಇಲಾಖೆಯ ಪೇಮೆಂಟ್ ಬ್ಯಾಂಕ್ ಆರಂಭ

ಕಾಸರಗೋಡು,ಮೇ 20: ಟಪಾಲು ಇಲಾಖೆಯ ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ) ನ ಮೊದಲ ಶಾಖೆ ಕೇರಳದಲ್ಲಿ ಮುಂದಿನ ತಿಂಗಳು ಆರಂಭಗೊಳ್ಳಲಿದೆ. ಸಾಲಸೌಲಭ್ಯವನ್ನು ಹೊರತು ಪಡಿಸಿ ಉಳಿದೆಲ್ಲಾ ಬ್ಯಾಂಕಿಂಗ್ ಸೇವೆಗಳನ್ನು ಅಂಚೆ ಬ್ಯಾಂಕ್ ಕೂಡ ಗ್ರಾಹಕರಿಗೆ ಒದಗಿಸಲಿದೆ.
ತಿರುವನಂತಪುರಂ, ಎರ್ನಾಕುಲಂ, ಕಲ್ಲಿಕೋಟೆಯ ವಲಯ ಅಂಚೆ ಕಚೇರಿಗಳಲ್ಲಿ ಪ್ರಪ್ರಥಮ ಮೂರು ಅಂಚೆಬ್ಯಾಂಕ್ ಶಾಖೆಗಳು ಕೇರಳದಲ್ಲಿ ಪ್ರಾರಂಭಗೊಳ್ಳಲಿವೆ. ಆ ನಂತರ ಕೇರಳದ ಎಲ್ಲ ಜಿಲ್ಲೆಗಳಿಗೂ ಅಂಚೆ ಬ್ಯಾಂಕ್ ವಿಸ್ತರಣೆಗೊಳ್ಳಲಿದೆ. ಕೇಂದ್ರಸರಕಾರ,ಸೆಪ್ಟಂಬರ್‌ನಲ್ಲಿ ದೇಶದ 650 ಜಿಲ್ಲೆಗಳಲ್ಲಿ ಬ್ಯಾಂಕ್ ತೆರೆಯಲ್ಪಟ್ಟಿರಬೇಕೆಂದು ಸೂಚನೆ ಹೊರಡಿಸಿತ್ತು. ಈಗಾಗಲೇ ಪರೀಕ್ಷಾರ್ಥ ತೆರೆಯಲಾದ ಛತ್ತೀಸ್‌ಗಡದ ರಾಜಧಾನಿ ರಾಯ್‌ಪುರ ಮತ್ತು ಝಾರ್ಕಂಡ್ ರಾಜಧಾನಿ ರಾಂಚಿಯಲ್ಲಿ ಎರಡು ಟಪಾಲು ಬ್ಯಾಂಕ್‌ಗಳು ಯಶಸ್ವಿಯಾಗಿ ಕಾರ್ಯವೆಸಗುತ್ತಿವೆ. ಒಂದೇಬಾರಿಗೆ 1,54,000 ಟಪಾಲು ಬ್ಯಾಂಕ್ ಶಾಖೆಗಳು ದೇಶಾದ್ಯಂತ ಏಕಕಾಲಕ್ಕೆ ಅಸ್ತಿತ್ವವನ್ನು ಪಡೆದುಕೊಳ್ಳಲಿದೆ.
Next Story





