ಸುರೇಶ್ ಗೋಪಿ ರಾಜಕೀಯ ಪಕ್ವತೆ ಪ್ರದರ್ಶಿಸಲಿ : ಪಿಣರಾಯಿ ವಿಜಯನ್

ತಿರುವನಂತಪುರಂ,ಮೇ 20: ಬಿಜೆಪಿ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿಯ ಟೀಕೆಯ ವಿರುದ್ಧ ರಂಗಪ್ರವೇಶಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದಾರೆ. ಅಭಿವೃದ್ಧಿ ಕಾರ್ಯಕ್ಕೆ ಯಾರು ಅಡ್ಡಿಪಡಿಸಿದ್ದಾರೆ ಎಂದು ಸುರೇಶ್ ಗೋಪಿಯನ್ನು ಪ್ರಶ್ನಿಸಿದ್ದಾರೆ. ಸುರೇಶ್ ಗೋಪಿ ಮುಂಬೈಗೆ ತೆರಳಿದ್ದಾಗ ಕೇರಳದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಹೇಳಿದ್ದರು. ಮುಖ್ಯಮಂತ್ರಿ ಸುರೇಶ್‌ರ ಹೇಳಿಕೆಯನ್ನು ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ.
ಸಂಸದರ ನಿಧಿ ವಿನಿಯೋಗಕ್ಕೆ ಕೇರಳದಲ್ಲಿ ಯಾರು ಅಡ್ಡಿಯಾಗಿದ್ದಾರೆ. ಯಾವ ಯೋಜನೆ ಸ್ಥಗಿತಗೊಂಡಿದೆ.ಸುರೇಶ್ ಏನು ಹೇಳುತ್ತಿದ್ದಾರೆ. ಸ್ವಲ್ಪ ರಾಜಕೀಯ ಪಕ್ವತೆಯನ್ನುಅವರು ಪ್ರದರ್ಶಿಸಬೇಕು ಎಂದು ಮುಖ್ಯಮಂತ್ರಿ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕೇರಳದಲ್ಲಿ ಬಿಜೆಪಿಗೆ ಜನಪ್ರತಿನಿಧಿಗಳಿದ್ದಾರೆ. ಕೆಲವು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅವರದೇ ಆಡಳಿತ ಇದೆ. ಅಲ್ಲೆಲ್ಲ ಸುರೇಶ್‌ಗೋಪಿಗೆ ಯಾವುದಾದರೂ ಕೆಟ್ಟ ಅನುಭವ ಆಗಿದೆಯೇ ಎಂದು ಪಿಣರಾಯಿ ವಿಜಯನ್ ಫೇಸ್‌ಬುಕ್ ಮೂಲಕ ಪ್ರಶ್ನಿಸಿದ್ದಾರೆ.





