ಭಟ್ಕಳ: ಅಂಜುಮನ್ B.Ed ಕಾಲೇಜಿಗೆ ಶೇ.100 ಫಲಿತಾಂಶ

ಸ್ವಾತಿ ನಾಗೇಶ್ ದೇಶಭಂಡಾರಿ, ಸುಧಾ ಸುಕ್ಕಪ್ಪ ನಾಯ್ಕ, ಖಮರುನ್ನೀಸಾ
ಭಟ್ಕಳ, ಮೇ 20: ಇಲ್ಲಿನ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯಕ್ಕೆ ಬಿಇಡಿ ದ್ವಿತೀಯ ಸೆಮಿಸ್ಟರ್ ಫಲಿತಾಂಶ ಶೇ 100 ದಾಖಲಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
33 ವಿದ್ಯಾರ್ಥಿಗಳಲ್ಲಿ 27 ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು 6 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಸ್ವಾತಿ ನಾಗೇಶ್ ದೇಶಭಂಡಾರಿ 85.16% ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಸುಧಾ ಸುಕ್ಕಪ್ಪ ನಾಯ್ಕ 85%, ಖಮರುನ್ನೀಸಾ 84.83%, ಕಿರಣ್ ದೇವಾಡಿಗ 84.50%, ಸಂಧ್ಯಾ ದೇವಪ್ಪ ಗಾಡಿಗ್ 84.50%, ಝೈನುಲ್ ಅರಬ್ 84.50%, ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





