Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದಂಗೆಪೀಡಿತ ಸಹರಾನ್‌ಪುರದಲ್ಲಿ...

ದಂಗೆಪೀಡಿತ ಸಹರಾನ್‌ಪುರದಲ್ಲಿ ಬೌದ್ಧಧರ್ಮಕ್ಕೆ ಮತಾಂತರಗೊಂಡ 180 ದಲಿತ ಕುಟುಂಬಗಳು

ವಾರ್ತಾಭಾರತಿವಾರ್ತಾಭಾರತಿ20 May 2017 6:12 PM IST
share
ದಂಗೆಪೀಡಿತ ಸಹರಾನ್‌ಪುರದಲ್ಲಿ ಬೌದ್ಧಧರ್ಮಕ್ಕೆ ಮತಾಂತರಗೊಂಡ 180 ದಲಿತ ಕುಟುಂಬಗಳು

ಮೀರತ್,ಮೇ 20: ಕಳೆದ ತಿಂಗಳು ಸಹರಾನ್‌ಪುರದಲ್ಲಿ ಹಿಂಸಾಚಾರದ ಘಟನೆಗಳು ನಡೆದ ಬಳಿಕ ತಮ್ಮ ಸಮುದಾಯವನ್ನು ಮತ್ತು ಭೀಮ್ ಸೇನೆಯನ್ನು ಅನ್ಯಾಯವಾಗಿ ಗುರಿಯಾಗಿಸಿಕೊಂಡು ದೌರ್ಜನ್ಯವೆಸಗುತ್ತಿರುವುದನ್ನು ಪ್ರತಿಭಟಿಸಿ ಸಹರಾನ್‌ಪುರ ಜಿಲ್ಲೆಯ ಮೂರು ಗ್ರಾಮಗಳ ಸುಮಾರು 180 ದಲಿತ ಕುಟುಂಬಗಳು ಬೌದ್ಧಧರ್ಮಕ್ಕೆ ಮತಾಂತರಗೊಂಡಿವೆ.

ಶಬ್ಬೀರ್‌ಪುರದಲ್ಲಿ ಠಾಕೂರ್‌ಗಳು ದಲಿತ ಸಮುದಾಯಕ್ಕೆ ಸೇರಿದ 60 ಕುಟುಂಬ ಗಳನ್ನು ಸುಟ್ಟುಹಾಕಿದ್ದರು. ಅಂದಿನಿಂದಲೂ ತಾವು ಭಯದಲ್ಲಿ ಬದುಕುತ್ತಿದ್ದಾಗಿ ಗ್ರಾಮದ ದಲಿತ ನಿವಾಸಿಗಳು ಹೇಳಿದ್ದಾರೆ.

ಪೊಲೀಸರು ಮತ್ತು ಠಾಕೂರ್‌ಗಳು ಪರಸ್ಪರ ಶಾಮೀಲಾಗಿದ್ದಾರೆ. ನಾವು ಊರನ್ನೇ ಬಿಟ್ಟು ಪರಾರಿಯಾಗಲು ಬಯಸಿದ್ದೆವು. ಮತಾಂತರವು ನಮಗೆ ಕೊಂಚ ಬಲ ನೀಡಲಿದೆ ಎಂದು ನಾವು ಆಶಿಸಿದ್ದೇವೆ ಎಂದು ಶಬ್ಬೀರ್‌ಪುರದ ದಲಿತ ನಿವಾಸಿಯೋರ್ವ ಹೇಳಿದ.

ಇತ್ತೀಚಿನ ದಿನಗಳಲ್ಲಿ ದಲಿತರನ್ನು ಗುರಿಯಾಗಿಸಿಕೊಂಡಿದ್ದ ಹಲವಾರು ಹಿಂಸಾಚಾರದ ಘಟನೆಗಳಿಗೆ ಸಹರಾನ್‌ಪುರ ಸಾಕ್ಷಿಯಾಗಿದೆ. ಸಡಕ್ ದೂಧ್ಲಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ಸಂದರ್ಭ ದಲಿತರು ಮತ್ತು ಮೇಲ್ಜಾತಿಗಳ ನಡುವೆ ಘರ್ಷಣೆಗಳು ನಡೆದಿದ್ದರೆ, ಶಬ್ಬೀರ್‌ಪುರ ಗ್ರಾಮದಲ್ಲಿ ಠಾಕೂರ್‌ಗಳು ಮಹಾರಾಣಾ ಪ್ರತಾಪರ ಉತ್ಸವದ ಅಂಗವಾಗಿ ನಡೆಸಿದ್ದ ಮೆರವಣಿಗೆ ಸಂದರ್ಭ ಹಿಂಸಾಚಾರ ನಡೆದು ಠಾಕೂರ್ ಸಮುದಾಯಕ್ಕೆ ಸೇರಿದ ಓರ್ವ ವ್ಯಕ್ತಿ ಮೃತಪಟ್ಟು, ಉಭಯ ಸಮುದಾಯಗಳ ಹಲವಾರು ಜನರು ಗಾಯಗೊಂಡಿದ್ದರು. ಇನ್ನೊಂದು ಪ್ರಕರಣದಲ್ಲಿ ಭೀಮ್ ಸೇನೆಯ ನೇತೃತ್ವದಲ್ಲಿ ‘ಮಹಾ ಪಂಚಾಯತ್’ ನಡೆಸಲು ತೆರಳುತ್ತಿದ್ದ ದಲಿತರನ್ನು ಪೊಲೀಸರು ತಡೆದಾಗ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವಿಕೆ ಕೃತ್ಯಗಳು ನಡೆದು,ಮೂವರು ಪೊಲೀಸರು ಗಾಯಗೊಂಡಿದ್ದರು. ಆಗಿನಿಂದಲೂ ಭೀಮ ಸೇನೆಯ ಕಾರ್ಯಕರ್ತರು ತಲೆಮರೆಸಿ ಕೊಂಡಿದ್ದು, ಅವರ ವಿರುದ್ಧ ಹಲವಾರು ಎಫ್‌ಐಆರ್‌ಗಳು ದಾಖಲಾಗಿವೆ.

ಪ್ರತಿಯೊಬ್ಬರೂ ದಲಿತರು ಮತ್ತು ಭೀಮ್ ಸೇನೆಯನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ನಿಜ ಹೇಳಬೇಕೆಂದರೆ ದಲಿತರ ಮೇಲಿನ ದಾಳಿಗಳು ಪೂರ್ವ ಯೋಜಿತವಾಗಿದ್ದವು. ಪುರುಷರು ಹೊಲಗದ್ದೆಗಳಿಗೆ ತೆರಳಿದ್ದಾಗ ಗ್ರಾಮಗಳ ಮೇಲೆ ದಾಳಿಗಳು ನಡೆದಿವೆ. ಮಹಿಳೆಯರನ್ನು ಥಳಿಸಲಾಗಿದೆ. ಓರ್ವ ಮಹಿಳೆಯ ಕೈಯನ್ನು ತಲವಾರಿನಿಂದ ಕಡಿಯಲಾಗಿದೆ. ಆದರೆ ಆ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ಅವರು ದುರ್ಬಲ ದಲಿತರ ಪರ ಶ್ರಮಿಸುತ್ತಿರುವ ಭೀಮ್ ಸೇನೆಯನ್ನು ಗುರಿಯಾಗಿಸಿ ಕೊಂಡಿದ್ದಾರೆ. ಅವರು ನಮ್ಮನ್ನು ನಕ್ಸಲರೆಂದು ಕರೆಯುತ್ತಿದ್ದಾರೆ,14 ವರ್ಷಗಳ ದಲಿತ ಬಾಲಕರನ್ನೂ ಕಂಬಿಗಳ ಹಿಂದೆ ತಳ್ಳುತ್ತಿದ್ದಾರೆ ಎಂದು ಭೀಮ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿನಯ ರತನ್ ಸಿಂಗ್ ಅವರು ಅಜ್ಞಾತ ಸ್ಥಳವೊಂದರಿಂದ ದೂರವಾಣಿಯಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ಮತಾಂತರವು ಆರಂಭವಷ್ಟೇ. ಈಗ ಇನ್ನಷ್ಟು ದಲಿತರು ಬೌದ್ಧಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ. ಹಿಂದು ಧರ್ಮದಲ್ಲಿ ನಮ್ಮನ್ನೂ ಮನುಷ್ಯರೆಂದು ಪರಿಗಣಿಸ ದಿದ್ದರೆ ನಾವು ಮೂಕಪ್ರೇಕ್ಷಕರಾಗುಳಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ಆದರೆ ಮತಾಂತರವನ್ನು ಸಹರಾನ್‌ಪುರ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ. ಬೌದ್ಧಧರ್ಮವೂ ಹಿಂದುತ್ವದ ಒಂದು ಕವಲು ಎನ್ನುತ್ತಾರೆ ಅವರು.

ದಲಿತರ ಮತಾಂತರದಿಂದ ತನಗೆ ಅಚ್ಚರಿಯಾಗಿಲ್ಲ. ಜನರು ದಮನಿಸಲ್ಪಟ್ಟಾಗ ಪ್ರತಿಕ್ರಿಯೆ ಸಹಜವೇ ಆಗಿದೆ. 2014ರಿಂದೀಚಿಗೆ ಸಮಾಜದಲ್ಲಿ ದಲಿತ ವಿರೋಧಿ ಭಾವನೆ ಹೆಚ್ಚುತ್ತಿದೆ ಎಂದು ದಲಿತ ಚಿಂತಕ-ಲೇಖಕ ಚಂದ್ರಭಾನ್ ಪ್ರಸಾದ್ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X