ಯುವಕ ಆತ್ಮಹತ್ಯೆ
ಬೆಳ್ತಂಗಡಿ, ಮೇ 20: ಲಾಯಿಲ ಗ್ರಾಮದ ಪಡ್ಲಾಡಿ ಅಜೆಕಲ್ ನಿವಾಸಿ ಯುವರಾಜ್ ನಾಯ್ಕ (30) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಲಾಯಿಲ ಗ್ರಾಮದ ದರ್ಪಿಂಜೆ ಸಮೀಪದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವರ್ಷದ ಹಿಂದೆಯಷ್ಟೇ ಮೃತನ ತಂದೆ ನಾರಾಯಣ ನಾಯ್ಕ ಆತ್ಮಹತ್ಯೆಗೆ ಶರಣಾಗಿದ್ದರು. ಇದರಿಂದಾಗಿ ಮಾನಸಿಕವಾಗಿ ನೊಂದು ವಿಪರೀತವಾಗಿ ಅಮಲು ಪದಾರ್ಥ ಸೇವಿಸುತ್ತಿದ್ದು, ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಮೃತನ ಚಿಕ್ಕಪ್ಪ ಪದ್ಮ ನಾಯ್ಕ ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮೃತರು ವಿವಾಹಿರಾಗಿದ್ದು, ಪತ್ನಿ , ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Next Story





