ಮೇ 23: ಬೀದಿಬದಿ ವ್ಯಾಪಾರಸ್ಥರ ಸಂಘದ ಮಹಾಸಭೆ
ಮಂಗಳೂರು, ಮೇ 20: ‘ಹಕ್ಕುಗಳ ರಕ್ಷಣೆಗಾಗಿ, ಸಾಮಾಜಿಕ ಭದ್ರತೆಗಾಗಿ’ ಎಂಬ ಘೋಷಣೆಯೊಂದಿಗೆ ಸಿಐಟಿಯು ನೊಂದಿಗೆ ಸಂಯೋಗಗೊಂಡಿರುವ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ 5ನೆ ವಾರ್ಷಿಕ ಮಹಾಸಭೆಯು ಮೇ 23ರಂದು ಬೆಳಗ್ಗೆ 10ಕ್ಕೆ ನಗರದ ಎನ್‌ಜಿಒ ಹಾಲ್‌ನಲ್ಲಿ ಜರಗಲಿದೆ. ಈ ಸಂದರ್ಭ ಎಲ್ಲ ಬೀದಿಬದಿ ವ್ಯಾಪಾರ ಸ್ಥರಿಗೆ ಗುರುತಿನ ಚೀಟಿ, ಉಚಿತ ಮನೆ ನಿವೇಶನ, ಬಿಪಿಎಲ್ ರೇಶನ್ ಕಾರ್ಡ್ ನೀಡಲು ಒತ್ತಾಯಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





