ಸೋದೆ- ಸುಬ್ರಹ್ಮಣ್ಯ ಮಠಗಳ ಐತಿಹಾಸಿಕ ಸಮಾಗಮ
ಉಡುಪಿ, ಮೇ 20: ಆಚಾರ್ಯ ಮಧ್ವರ ಸೋದರ ಶ್ರೀವಿಷ್ಣುತೀರ್ಥಾಚಾರ್ಯ ರಿಂದ ಆರಂಭಗೊಂಡ ಸೋದೆ ಮತ್ತು ಸುಬ್ರಹ್ಮಣ್ಯ ಮಠಗಳು ಕಾರಣಾಂತರಗಳಿಂದ ಸಂಪರ್ಕ ಕಡಿದುಕೊಂಡಿದ್ದು ಇದೀಗ ಉಭಯ ಮಠಗಳ ಐತಿಹಾಸಿಕ ಸಮಾಗಮಕ್ಕೆ ಕಾಲ ಕೂಡಿಬಂದಿದೆ. ಸುಮಾರು 250 ವರ್ಷಗಳ ಬಳಿಕ ಉಭಯ ಮಠಗಳು ಒಂದಾಗುತ್ತಿದೆ. ಸೋದೆ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಮತ್ತು ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಸಂಕಲ್ಪದಂತೆ ಮೇ 29ರಂದು ಉಭಯ ಮಠಗಳ ಯತಿಗಳು ಉಡುಪಿ ಶ್ರೀಅನಂತೇಶ್ವರ ದೇವರ ಸನ್ನಿಧಿಯ ಆಚಾರ್ಯ ಮಧ್ವರ ಸನ್ನಿಧಿಯಲ್ಲಿ ಸಮಾಗಮಗೊಳ್ಳಲಿರುವರು ಎಂದು ಪ್ರಕಟನೆ ತಿಳಿಸಿದೆ.
Next Story





