ಇಂದು ಎಸ್‌ವೈಎಸ್ ಸೆಂಟರ್ ಕ್ಯಾಂಪ್
ಮೆಲ್ಕಾರ್, ಮೇ 20: ಎಸ್‌ವೈಎಸ್ ಪಾಣೆಮಂಗಳೂರು ಸೆಂಟರ್ ಕ್ಯಾಂಪ್ ಮೇ 21ರಂದು ಅಪರಾಹ್ನ 2ರಿಂದ 5ರ ತನಕ ಹಿದಾಯತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಲಿದೆ.ಸೆಂಟರ್ ಅಧ್ಯಕ್ಷ ಪಿ.ಐ.ಬಿ. ಅಬ್ದುಲ್ ಹಮೀದ್ ಹಾಜಿ ಆಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಬದ್ರುದ್ದೀನ್ ಅಹ್ಸನಿ ಶಿಬಿರ ಉದ್ಘಾಟಿಸುವರು. ಎಸ್‌ವೈಎಸ್ ಜಿಲ್ಲಾ ಉಪಾಧ್ಯಕ್ಷ ಸಿ. ಎಚ್.
ಮುಹಮ್ಮದಲಿ ಸಖಾಫಿ ವಿಷಯ ಮಂಡಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





