ಅಂಬೇಡ್ಕರ್ ಪ್ರತಿಮೆಗೆ ಹಾನಿ ಪ್ರಕರಣ: ನಾಲ್ವರು ಬಂಧನ

ಲಕ್ನೋ, ಮೇ 21: ‘ಸಂವಿಧಾನ ಶಿಲ್ಪಿ’ ಬಿ.ಆರ್. ಅಂಬೇಡ್ಕರ್‌ರ ಪ್ರತಿಮೆಗೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಸಹರಾನ್‌ಪುರ ಜಿಲ್ಲೆಯ ಮಿರ್ಝಾಪುರ ಗ್ರಾಮದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಹಾನಿ ಮಾಡಿರುವ ಘಟನೆಯು ಮೇ 19ಕ್ಕೆ ಬೆಳಕಿಗೆ ಬಂದಿತ್ತು. ಘಟನೆಯ ಬಳಿಕ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದು, ಶನಿವಾರ ಕೃತ್ಯ ಎಸಗಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಉತ್ತರಪ್ರದೇಶ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
‘‘ಪ್ರಕರಣ ದಾಖಲಿಸಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಇನ್ನಷ್ಟು ಶಂಕಿತರಿಗಾಗಿ ಹುಡುಕಾಟ ಮುಂದುವರಿದಿದೆ. ಇತ್ತೀಚೆಗಷ್ಟೇ ಅಂಬೇಡ್ಕರ್‌ರ ಹಳೆಯ ಪ್ರತಿಮೆಯನ್ನು ತೆಗೆದು ಹೊಸ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಹಳ್ಳಿಯಲ್ಲಿ ಪ್ರತಿಮೆಯ ಭದ್ರತೆಗಾಗಿ ಹಳ್ಳಿಯ 10 ಸದಸ್ಯರ ತಂಡವನ್ನು ರಚಿಸಿದ್ದೇವೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
.
Next Story





