ಮೊಬೈಲ್ ಫೋನ್ ಗಳಿದ್ದ ಟ್ರಕ್ ದರೋಡೆ

ಹೊಸದಿಲ್ಲಿ,ಮೇ 21: ಟ್ರಕ್ಕೊಂದರಲ್ಲಿ ಸಾಗಿಸಲಾಗುತ್ತಿದ್ದ ಮೊಬೈಲ್‌ಪೋನ್‌ಗಳನ್ನು ದರೋಡೆ ಮಾಡಿದ ಪ್ರಕರಣದಲ್ಲಿ ನಾಲ್ವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ದಿಲ್ಲಿ ಬುರಾರಿ ಬೈಪಾಸ್ ಸಮೀಪದಲ್ಲಿ ದರೋಡೆ ಕೃತ್ಯ ನಡೆದಿತ್ತು. ಟ್ರಕ್‌ನಲ್ಲಿ ಮೊಬೈಲ್ ಫೋನ್‌ಗಳನ್ನು ಸಾಗಿಸುತ್ತಿದ್ದ ವೇಳೆ ಚಾಲಕನ ಸಹಿತ ಟ್ರಕ್‌ನ್ನು ಅಪಹರಿಸಿದ ದರೋಡೆಕೋರರ ತಂಡ ನಂತರ ಚಾಲಕನನ್ನು ಬಿಡುಗಡೆಗೊಳಿಸಿತ್ತು. ಪೊಲೀಸರು ಆರೋಪಿಗಳ ವಿರುದ್ಧ ಚಾಲಕನ ಅಪಹರಣ ಹಾಗೂ ಫೋನ್ ದರೋಡೆ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story





