ಮರ್ಮಾಂಗ ಕತ್ತರಿಸಿಕೊಂಡ ಸ್ವಾಮಿಗೆ ಸಂಘಪರಿವಾರದೊಂದಿಗೆ ಬಲವಾದ ನಂಟು: ಪುರಾವೆಗಳ ಸಹಿತ ಬಹಿರಂಗ!

ತಿರುವನಂತಪುರಂ,ಮೇ 21: ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಯುವತಿಯಿಂದ ಮರ್ಮಾಂಗ ಕತ್ತರಿಸಲ್ಪಟ್ಟು ಆಸ್ಪತ್ರೆ ಸೇರಿದ ಸ್ವಾಮಿ ಗಂಗೇಶಾನಂದ ತೀರ್ಥಪಾದ ಯಾನೆ ಹರಿಸ್ವಾಮಿಗೂ ಸಂಘಪರಿವಾರಕ್ಕೂ ಇರುವ ನಂಟಿನ ಬಗ್ಗೆ ಪುರಾವೆಗಳು ಇದೀಗ ಲಭಿಸಿವೆ. ಸಂಘಪರಿವಾರ ನಡೆಸುತ್ತಿದ್ದ ಬಹುತೇಕ ಎಲ್ಲ ಹೋರಾಟಗಳಲ್ಲಿ ಹರಿಸ್ವಾಮಿ ಮುಂಚೂಣಿಯಲ್ಲಿರುತ್ತಿದ್ದರು. ಸರಕಾರ ಮತ್ತು ಆಡಳಿತವರ್ಗಗಳೊಂದಿಗೆ ಚರ್ಚಿಸಿದ್ದ ಸಂಘಪರಿವಾರದ ತಂಡಗಳಲ್ಲಿ ಕೂಡಾ ಸ್ವಾಮಿ ಸದಸ್ಯನಾಗಿದ್ದುದು ಕೂಡಾ ಬಹಿರಂಗವಾಗಿದೆ.
ಅಧ್ಯಾತ್ಮದ ನೆಪದಲ್ಲಿ ತನ್ನ ಹಿತಾಸಕ್ತಿಗಳನ್ನು ಸ್ವಾಮಿ ಯಶಸ್ವಿಯಾಗಿ ರಕ್ಷಿಸಿಕೊಳ್ಳುತ್ತಿದ್ದರು. ಸನ್ಯಾಸಾಶ್ರಮಕ್ಕೆ ಸೇರುವ ಮೊದಲು ಕೊಲಂಚೇರಿ ಎಂಬಲ್ಲಿ ಒಂದು ಮಾಮುಲಿ ಹೋಟೆಲ್ ಇಟ್ಟುಕೊಂಡಿದ್ದ ಈಸ್ವಾಮಿ ನಷ್ಟವಾದ ಹೋಟೆಲಿಗೆ ಹಣ ಹೂಡಿದ್ದ ಇತರ ಗೆಳೆಯರಿಗೆ ಫಂಗನಾಮ ಹಾಕಿ ಪರಾರಿಯಾಗಿದ್ದರು. ಅಲ್ಲಿಂದ ಪರಾರಿಯಾದ ಹರಿಸ್ವಾಮಿ ಸನ್ಯಾಸಿಯಾಗಿ ಪ್ರತ್ಯಕ್ಷವಾಗಿದ್ದರು.
ಸ್ವಾಮಿ ಸಂಘಪರಿವಾರದ ವಿವಿಧ ಕಾರ್ಯಕ್ರಮಗಳಲ್ಲಿ ಗಂಗೇಶಾನಂದ ತೀರ್ಥಪಾದ ಎನ್ನುವ ಹೆಸರಿನಲ್ಲಿ ಈತ ಸದಾ ಮುಂಚೂಣಿಯಲ್ಲಿ ಇರುತ್ತಿದ್ದರು. ಊರಿಡಿ ಬುಲೆಟ್‌ನಲ್ಲಿ ಸುತ್ತಾಡುತ್ತಿದ್ದರಿಂದ ಇವರನ್ನು ಕೆಲವರು ಬುಲೆಟ್ ಸ್ವಾಮಿ ಎಂದು ಕರೆಯುತ್ತಿದ್ದರು. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ತಿರುವನಂತಪುರಂನಲ್ಲಿ ಸಂಘಪರಿವಾರದ ಎಲ್ಲ ವಿಷಯಗಳಲ್ಲಿ ಸ್ವಾಮಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಇದರಲ್ಲಿ ಚಿಟ್ಟಂಬಿಸ್ವಾಮಿ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಹರಿಸ್ವಾಮಿ ಇದ್ದರು. ಮಲಬಾರ್ ಪ್ರಾಂತದ 120 ದೇವಸ್ಥಾನಗಳನ್ನು ಮುಜರಾಯಿ ಇಲಾಖೆ(ದೇವಸ್ವಂ ಬೋರ್ಡ್) ವಶಕ್ಕೆ ಪಡೆಯಲು ಸಿದ್ಧವಾದಾಗ ಸಂಘಪರಿವಾರದ ಹೋರಾಟಗಳಲ್ಲಿ ಸ್ವಾಮಿ ಕಂಡುಬಂದಿದ್ದರು. ಮಾತ್ರವಲ್ಲ ಅಂದಿನ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್‌ರನ್ನು ಭೇಟಿಯಾದ ತಂಡದಲ್ಲಿ ಕೂಡಾ ಸ್ವಾಮಿಯೇ ಮುಖ್ಯ ಪಾತ್ರವಹಿಸಿದ್ದರು. ಹಿಂದು ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಮುಖ್ಯ ಅವರು ಭಾಷಣಕಾರರಾಗಿರುತ್ತಿದ್ದರು. ಆರನ್ಮುಳ ಎಂಬಲ್ಲಿನ ಪರಿಸರ ಸಂರಕ್ಷಣಾ ಕಾರ್ಯಕ್ರಮದಲ್ಲಿ ಕೂಡಾ ಸ್ವಾಮಿ ಭಾಗವಹಿಸಿದ್ದರು. ಸನ್ಯಾಸಿ ಶ್ರೇಷ್ಠರ( ಉನ್ನತ ಸನ್ಯಾಸಿಗಳ) ನೇತೃದ ಸಮ್ಮೇಳನಕ್ಕೂ ಇವರೇ ಸಂಯೋಜಕರಾಗಿದ್ದರು. ಬಿಜೆಪಿಯ ಕೇರಳ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಹಿಂದೂ ಐಕ್ಯವೇದಿ(ಕೆ)ಯ ನಾಯಕರಾಗಿದ್ದ ವೇಳೆ ಹರಿಸ್ವಾಮಿ ಅವರೊಂದಿಗೆ ಭಾಗವಹಿಸಿದ್ದ ಅನೇಕ ಕಾರ್ಯಕ್ರಮಗಳ ಫೋಟೊ ಈಗಾಗಲೇ ವೈರಲ್ ಆಗಿವೆ. ಆದರೂ ಕುಮ್ಮನಂ ಈತನಿಗೂ ಹಿಂದೂ ಸಂಘಟನೆಗಳಿಗೂ ಸಂಬಂಧವೇ ಇಲ್ಲ ಎನ್ನುತ್ತಿರುವುದು ಸೋಜಿಗವಾಗಿದೆ. ಇದೇವೇಳೆ ಕುಮ್ಮನಂ ಪ್ರಕರಣದಲ್ಲಿ ತನಿಖೆ ಸರಿಯಾಗಿ ನಡೆದು ಅಪರಾಧಿ ಶಿಕ್ಷೆಗೊಳಗಾಬೇಕೆಂದು ಆಗ್ರಹಿಸಿದ್ದಾರೆ.







