ವೈದ್ಯರ ಮೇಲೆ ಹಲ್ಲೆಗೆ ಆಯುಷ್ ಖಂಡನೆ
ಉಡುಪಿ, ಮೇ 21: ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯ ರೋರ್ವರ ಮೇಲೆ ನಡೆದ ಹಲ್ಲೆಯನ್ನು ಭಾರತೀಯ ವೈದ್ಯ ಪದ್ಧತಿಗಳ ಉಡುಪಿ ಜಿಲ್ಲಾ ಘಟಕ (ಆಯುಷ್) ಖಂಡಿಸಿದೆ.
ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಿಂದಾಗಿ ವೈದ್ಯರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸುವುದು ಕಷ್ಟಕರವಾಗುತ್ತಿದೆ. ಮುಂದೆ ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು. ಮೇ 22ರಂದು ಮಂಗಳೂರಿನಲ್ಲಿ ನಡೆಯುವ ವೈದ್ಯರ ಧರಣಿಯಲ್ಲಿ ಆಯುಷ್ ಸಂಘಟನೆಯ ವೈದ್ಯರೂ ಭಾಗವಹಿಸುವರು ಎಂದು ಸಂಘಟನೆಯ ಜಿಲ್ಲಾ ಧ್ಯಕ್ಷ ಡಾ. ಎನ್.ಟಿ.ಅಂಚನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





