ಯುನಿವೆಫ್ ನಿಂದ ರಮಝಾನ್ ಸ್ವಾಗತ ಕಾರ್ಯಕ್ರಮ

ಮಂಗಳೂರು, ಮೇ 21: ಯುನಿವೆಫ್ ಕರ್ನಾಟಕ ದ.ಕ. ಘಟಕದ ವತಿಯಿಂದ ರಮಝಾನ್ ಸ್ವಾಗತ ಕಾರ್ಯಕ್ರಮವು ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ಜರಗಿತು.
ಯುನಿವೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀ ಉದ್ದೀನ್ ಕುದ್ರೋಳಿ ರಮಝಾನ್ ನ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುತ್ತಾ ಇಸ್ಲಾಮಿನಲ್ಲಿ ಝಕಾತ್ ಎಂಬುದು ಮನುಷ್ಯನನ್ನು ದಾರಿದ್ರ್ಯದಿಂದ ಸಂರಕ್ಷಿಸಿ ಸಮುದಾಯವನ್ನು ಸಬಲೀಕರಣಗೊಳಿಸುವ ಒಂದು ವ್ಯವಸ್ಥೆ. ಸಮುದಾಯವು ಕಟ್ಟುನಿಟ್ಟಾಗಿ ಇಸ್ಲಾಮಿನ ವಿಧಿಯಂತೆ ಝಕಾತ್ ನೀಡಿದ್ದಲ್ಲಿ ಅನೇಕ ಸಮಸ್ಯೆಗಳು ಪರಿಹಾರಗೊಳ್ಳುತ್ತಿದ್ದವು ಎಂದು ಹೇಳಿದರು.
ಮಂಗಳೂರು ಶಾಖಾ ಸದಸ್ಯ ಯೂನುಸ್ ಪರ್ವೇಝ್ ಕಿರಾಅತ್ ಪಠಿಸಿದರು. ರಾಜ್ಯ ಸಲಹಾ ಸಮಿತಿಯ ಸದಸ್ಯ ಅಡ್ವೊಕೇಟ್ ಸಿರಾಜುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
Next Story





