Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ.. ಮೆಣಸೇ..

ಓ.. ಮೆಣಸೇ..

ಪಿ.ಎ. ರೈಪಿ.ಎ. ರೈ22 May 2017 12:13 AM IST
share
ಓ.. ಮೆಣಸೇ..

  ಆಪ್ ದೇಶದಲ್ಲಿಯೇ ಅತ್ಯಂತ ಪಾರದರ್ಶಕ ಪಕ್ಷ
-ಸಂಜಯ್‌ಸಿಂಗ್, ಆಪ್ ನಾಯಕ
ಹಾಗೆಂದು ಬೆತ್ತಲೆ ನಿಂತರೆ ಹೇಗೆ?
---------------------
ವಿಧಾನ ಸಭೆ ಚುನಾವಣೆಯನ್ನು ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ

- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
     
ಮುಖ್ಯಮಂತ್ರಿ ಸ್ಥಾನಕ್ಕೂ ಸಾಮೂಹಿಕ ಸ್ಪರ್ಧೆ ನಡೆಯಲಿದೆ ಎಂದಾಯಿತು.

---------------------
  ಬಿಜೆಪಿ ಮಾತ್ರ ರಾಷ್ಟ್ರೀಯ ಚಿಂತನೆಯ ಏಕೈಕ ರಾಷ್ಟ್ರೀಯ ಪಕ್ಷ

- ನಳಿನ್ ಕುಮಾರ್ ಕಟೀಲು, ಸಂಸದ
 ಬೆಂಕಿ ಕೊಡುವುದು ನಿಮ್ಮ ಭಾಷೆಯಲ್ಲಿ ರಾಷ್ಟ್ರೀಯ ಚಿಂತನೆಯೇ?
---------------------
  ಚಾಮರಾಜನಗರಕ್ಕೆ ಭೇಟಿ ನೀಡಿದ ಮೇಲೆ ನನ್ನ ಕುರ್ಚಿ ಭದ್ರವಾಗಿದೆ

- ಸಿದ್ದರಾಮಯ್ಯ, ಮುಖ್ಯಮಂತ್ರಿ
ಇದ ಕೇಳಿ ಖರ್ಗೆ, ಪರಮೇಶ್ವರ್ ಮೊದಲಾದವರೆಲ್ಲ ಚಾಮರಾಜನಗರಕ್ಕೆ ಭೇಟಿ ನೀಡಲು ಅತ್ಯುತ್ಸಾಹಿತರಾಗಿದ್ದಾರೆ.
---------------------
ಇಂದಿರಾಗಾಂಧಿ ಇಂದಿಗೂ ಸ್ವೀಕಾರಾರ್ಹ ಪ್ರಧಾನಿ

- ಪ್ರಣವ್ ಮುಖರ್ಜಿ, ರಾಷ್ಟ್ರಪತಿ
ಸ್ವೀಕಾರಾರ್ಹ ರಾಷ್ಟ್ರಪತಿಯ ಹೆಸರನ್ನೂ ಹೇಳಿ.
--------------------- 
ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಡ

- ಪುನೀತ್ ರಾಜ್‌ಕುಮಾರ್, ನಟ
     ಕನ್ನಡದ ಡಬ್ಬಾ ಸಿನೆಮಾಗಳೇ ಸಾಕೇ?
---------------------
  ಸಂಗೊಳ್ಳಿ ರಾಯಣ್ಣ ಬ್ರೀಗೇಡ್‌ಗೂ ನನಗೂ ಸಂಬಂಧವಿಲ್ಲ

- ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ
ನಿಮಗೂ ಬಿಜೆಪಿಗೂ ಇರುವ ಸಂಬಂಧವನ್ನು ಜಾಹೀರುಪಡಿಸಿ.

---------------------
ಸದ್ಯದ ಶಿಕ್ಷಣ ವ್ಯವಸ್ಥೆ ಪರಿಪೂರ್ಣವಲ್ಲ

- ಸಿದ್ದರಾಮಯ್ಯ, ಮುಖ್ಯಮಂತ್ರಿ
 ಅದನ್ನು ಪರಿಪೂರ್ಣ ಮಾಡುವ ಉದ್ದೇಶವೂ ಇಲ್ಲವೇ?
---------------------
ನನ್ನ ದನಿ ಅಡಗಿಸಲು ಕೇಂದ್ರ ಸಂಚು ನಡೆಸುತ್ತಿದೆ

- ಚಿದಂಬರಂ, ಮಾಜಿ ಕೇಂದ್ರ ಸಚಿವ
ವಿದೇಶದಲ್ಲಿ ಹೋಗಿ ಅಡಗಿಕೊಂಡರೆ ಆಯಿತು ಬಿಡಿ.

---------------------
ತಪ್ಪು ಮಾಡಿದವರಿಗೆ ಶಾಸ್ತಿಯಾಗುವ ಕಾಲ ಬಂದಿದೆ

- ಅರುಣ್ ಜೇಟ್ಲಿ, ಕೇಂದ್ರ ಸಚಿವ
 ಅಡ್ವಾಣಿಯ ಬಗ್ಗೆ ಈ ಹೇಳಿಕೆಯೇ?
---------------------

ನಾವು ಮಾಡುವ ಕೆಲಸವನ್ನು ಮುಂಚಿತವಾಗಿ ಹೇಳುವುದಿಲ್ಲ, ಮಾಡಿ ತೋರಿಸುತ್ತೇವೆ

- ರಾಜನಾಥ್ ಸಿಂಗ್, ಕೇಂದ್ರ ಸಚಿವ

ನೋಟು ನಿಷೇಧದಿಂದ ಜನರಿಗೆ ಅನುಭವವಾಗಿದೆ ಬಿಡಿ.

---------------------
 ಮೋದಿಯದ್ದು ಮಾರ್ಕೆಟಿಂಗ್ ಸರಕಾರ

- ರಮ್ಯಾ, ಮಾಜಿ ಸಂಸದೆ
    ಸುಂದರ ರೂಪದರ್ಶಿಯರನ್ನು ಹುಡುಕುತ್ತಿದ್ದಾರೆ.
---------------------
ಯುವಕರು ಹೆಚ್ಚು ಭರವಸೆಯನ್ನು ಇಟ್ಟುಕೊಂಡಿರುವ ಒಂದೇ ಪಕ್ಷವೆಂದರೆ ಅದು ಬಿಜೆಪಿ

- ರವಿಕುಮಾರ್,ಬಿಜೆಪಿ ರಾಜ್ಯ ಕಾರ್ಯದರ್ಶಿ
ಆ ಭರವಸೆಯನ್ನು ಹುಸಿ ಮಾಡುವುದಕ್ಕೆ ಹಟ ತೊಟ್ಟಿರುವಂತಿದೆ.
---------------------
ನಾನು ಎಂದಿಗೂ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ.

- ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ
ಮುಖ್ಯಮಂತ್ರಿ ಕುರ್ಚಿಯಲ್ಲಿ ನಿಮ್ಮ ಆತ್ಮವಿದೆ ಎನ್ನುವುದು ನಾಡಿಗೇ ಗೊತ್ತು.

---------------------
ನನ್ನ ರಾಜಕೀಯ ಸೇರ್ಪಡೆ ದೈವೇಚ್ಛೆ.

- ರಜನಿಕಾಂತ್, ನಟ
 ಆದರೆ ರಾಜಕೀಯದಲ್ಲಿ ಡ್ಯೂಪ್‌ಗಳನ್ನು ಬಳಸುವಂತಿಲ್ಲ, ಎಚ್ಚರಿಕೆ.

---------------------
ಯಡಿಯೂರಪ್ಪ ಮತ್ತು ನಾನು ಒಂದೇ ಜೀವ.

- ಈಶ್ವರಪ್ಪ, ಬಿಜೆಪಿ ನಾಯಕ
ಆ ಒಂದು ಜೀವಕ್ಕಾಗಿ ಪರಸ್ಪರ ಕಚ್ಚಾಟವೇ?
---------------------
ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸನ್ನು ಬೆಂಬಲಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ

- ಹಾರ್ದಿಕ್ ಪಟೇಲ್, ಮೀಸಲಾತಿ ಹೋರಾಟಗಾರ
ಕಾಂಗ್ರೆಸ್‌ಗೆ ಇನ್ನೇನು ಕಾದಿದೆಯೋ?
---------------------
ಬಿಜೆಪಿ ಮುಖಂಡರು ದಲಿತರ ಮನೆಗಳಿಗೆ ಭೇಟಿ ನೀಡಿ ಊಟ ಮಾಡುತ್ತೇವೆ ಎಂದು ಹೇಳುತ್ತಿರುವುದು ಚುನಾವಣಾ ಗಿಮಿಕ್

- ಎಚ್.ಆಂಜನೇಯ, ಸಚಿವ
ತಾವು ಕೃಷ್ಣ ಮಠದಲ್ಲಿ ಊಟ ಮಾಡಿದ್ದು ಏನು ಎನ್ನುವುದನ್ನು ವಿವರಿಸುತ್ತೀರಾ?
---------------------
ನಾನು ಹುಲಿಯಲ್ಲ ಮನುಷ್ಯ

- ಕಾಗೋಡು ತಿಮ್ಮಪ್ಪ, ಸಚಿವ
ಹಲ್ಲು, ಉಗುರುಗಳಿಲ್ಲದ ಹುಲಿ ಎಂದಿದ್ದರೆ ಒಪ್ಪಿಕೊಳ್ಳಬಹುದಿತ್ತೇನೋ.
---------------------
  ನಾನು ರಾಷ್ಟ್ರ ರಾಜಕಾರಣದಲ್ಲಿ ಮೇಲೆ ಮೇಲೆ ಹೋಗುತ್ತಾ ಇದ್ದೇನೆ
 - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಬ್ಯಾಂಕ್ ಪಾಸ್‌ಬುಕ್‌ನಲ್ಲಿ ಹೆಚ್ಚುತ್ತಿರುವ ಠೇವಣಿಯ ಆಧಾರದಲ್ಲಿ ಹೇಳಿರಬೇಕು.

---------------------
ಇತ್ತೀಚೆಗೆ ಜನ ಆರೆಸ್ಸೆಸ್ ಬಗ್ಗೆ ಹೆಚ್ಚು ಕುತೂಹಲ ಹಾಗೂ ನಿರೀಕ್ಷೆಗಳನ್ನು ಹೊಂದಿದ್ದಾರೆ.

- ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ನಾಯಕ
ಹೌದು. ಜಾಫರ್ ಶರೀಫ್‌ಗೆ ಈಗ ಉಳಿದಿರುವ ಏಕೈಕ ನಿರೀಕ್ಷೆ ಆರೆಸ್ಸೆಸ್ ಅಂತೆ.

---------------------
 
ಕಾಂಗ್ರೆಸ್ ತೊರೆದವರಿಗೆ ಪಶ್ಚಾತ್ತಾಪ ಖಚಿತ

- ಮಾಣಿಕ್ಯಂ ಟಾಗೂರ್ , ಎಐಸಿಸಿ ಕಾರ್ಯದರ್ಶಿ
ಈ ಹಿಂದೆಯೇ ತೊರೆದಿದ್ದರೆ ಇನ್ನಷ್ಟು ಚೆನ್ನಾಗಿತ್ತು ಎಂಬ ಪಶ್ಚಾತ್ತಾಪವಿರಬೇಕು.

---------------------
 ನೋವು ನಮ್ಮನ್ನು ಗಟ್ಟಿಗೊಳಿಸುತ್ತದೆ

- ಬಾಬಾ ರಾಮ್‌ದೇವ್, ಯೋಗ ಗುರು
ತಮ್ಮ ಉತ್ಪನ್ನಗಳನ್ನು ಕೊಂಡವರಿಗೆ ಸಾಂತ್ವನವೇ?

share
ಪಿ.ಎ. ರೈ
ಪಿ.ಎ. ರೈ
Next Story
X