ರೈಫಲ್‌ಗಳೊಂದಿಗೆ ಪರಾರಿಯಾಗಿದ್ದ ಕಾಶ್ಮೀರಿ ಪೊಲೀಸ್ ಹಿಜ್ಬುಲ್‌ಗೆ ಸೇರ್ಪಡೆ

ಶ್ರೀನಗರ,ಮೇ 22: ಕಾಶ್ಮೀರದ ಬಡ್ಗಾಮ್ ಜಿಲ್ಲೆಯ ಪೊಲೀಸ್ ಚೌಕಿಯೊಂದರಿಂದ ನಾಲ್ಕು ಸರ್ವಿಸ್ ರೈಫಲ್‌ಗಳ ಸಹಿತ ಪರಾರಿಯಾಗಿದ್ದ ಪೊಲೀಸ್ ಕಾನ್‌ಸ್ಟೇಬಲ್ ಭಯೋತ್ಪಾದಕ ಸಂಘಟನೆ ಹಿಝ್ಬುಲ್ ಮುಜಾಹಿದೀನ್‌ಗೆ ಸೇರಿದ್ದಾನೆಂದು ವರದಿಯಾ ಗಿದೆ.
ಕಾನಸ್ಟೇಬಲ್ ಸೈಯದ್ ನವೀದ್ ಮುಷ್ತಾಕ್ ಶನಿವಾರ ಬಡ್ಗಾಮ್‌ನ ಚಾಂದಪೋರಾದಲ್ಲಿರುವ ಭಾರತೀಯ ಆಹಾರ ನಿಗಮದ ಗೋದಾಮಿನ ಭದ್ರತೆಗೆ ಸ್ಥಾಪಿಸಲಾಗಿರುವ ಪೊಲೀಸ್ ಚೌಕಿಯಲ್ಲಿದ್ದ ನಾಲ್ಕು ಇನ್ಸಾಸ್ ರೈಫಲ್‌ಗಳನ್ನು ಹೊತ್ತುಕೊಂಡು ಪರಾರಿಯಾಗಿದ್ದ ಎಂದು ತಿಳಿಸಿದ ಪೊಲೀಸ್ ಅಧಿಕಾರಿಗಳು, ಆತ ಹಿಝ್ಬುಲ್‌ಗೆ ಸೇರಿದ್ದಾನೆಂಬ ಗುಪ್ತಚರ ಮಾಹಿತಿಗಳು ಲಭಿಸಿವೆ ಎಂದರು.
ಜಮ್ಮು-ಕಾಶ್ಮೀರದ ಪೊಲೀಸರು ಸರ್ವಿಸ್ ರೈಫಲ್‌ಗಳೊಂದಿಗೆ ಪರಾರಿಯಾಗಿ ವಿವಿಧ ಉಗ್ರಗಾಮಿ ಗುಂಪುಗಳನ್ನು ಸೇರಿರುವ ಹಲವಾರು ನಿದರ್ಶನಗಳಿವೆ.
ಪುಲ್ವಾಮಾ ಜಿಲ್ಲೆಯ ನಿವಾಸಿಯಾಗಿದ್ದ ಕಾನ್‌ಸ್ಟೇಬಲ್ ನಾಸಿರ್ ಅಹ್ಮದ್ ಪಂಡಿತ್ ಎಂಬಾತ 2015,ಮಾ.27ರಂದು ಪಿಡಿಪಿ ಸಚಿವ ಅಲ್ತಾಫ್ ಬುಖಾರಿಯವರ ನಿವಾಸದಿಂದ ಎರಡು ಸರ್ವಿಸ್ ರೈಫಲ್‌ಗಳೊಂದಿಗೆ ಪರಾರಿಯಾಗಿದ್ದು, ಬಳಿಕ 2016, ಎಪ್ರಿಲ್‌ನಲ್ಲಿ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದ.







