ಟೋಲ್ ಪ್ಲಾಝಾಕ್ಕೆ ಬಜರಂಗದಳದಿಂದ ದಾಳಿ: ನೌಕರರಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ

ಇಂದೋರ್,ಮೇ 22: ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಜರಂಗದಳದವರೆನ್ನಲಾದ ಇಪ್ಪತ್ತೈದು ಮಂದಿಯ ತಂಡ ಟಾಲ್‌ಫ್ಲಾಝಾವೊಂದಕ್ಕೆ ದಾಳಿ ಮಾಡಿದೆ. ಮಧ್ಯಪ್ರದೇಶದ ದೇವಾಸ್-ಇಂದೋರ್ ರಸ್ತೆಯಲ್ಲಿ ಈ ಟೋಲ್ ಪ್ಲಾಝಾ ಇದೆ. ಕಬ್ಬಿಣದ ರಾಡ್‌ನಿಂದ ಟೋಲ್ ಪ್ಲಾಝಾದ ನೌಕರರನ್ನು ಥಳಿಸಿದ್ದಾರೆ.ಟೋಲ್‌ಬೂತ್‌ಗೆ ಹಾನಿಎಸಗಿದ್ದಾರೆ. ಅಲ್ಲಿಂದ ಹಣವನ್ನು ಕೂಡಾದೋಚಿದ್ದಾರೆ ಎನ್ನಲಾಗಿದೆ. ಘಟನೆ ಸಂಪೂರ್ಣ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಈ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳನ್ನು ಬಜರಂಗದಳದ ಕಾರ್ಯಕರ್ತರು ಎನ್ನಲಾಗಿದೆ. ಟೋಲ್ ಶುಲ್ಕ ಸಂಗ್ರಹದ ವಿಷಯದಲ್ಲಿ ಇತ್ತೀಚೆಗೆ ಘರ್ಷಣೆ ನಡೆದಿತ್ತು.
ಈ ಮೊದಲು ಉತ್ತರಪ್ರದೇಶದ ಟೋಲ್ ಫ್ಲಾಝಾದಲ್ಲಿ ಇಂತಹದೆ ಒಂದು ಘಟನೆ ನಡೆದಿತ್ತು. ಉತ್ತರಪ್ರದೇಶದ ಸೀತಾಪುರ ಶಾಸಕ ರಾಕೇಶ್ ರಾಠೋಡ್ ಟೋಲ್‌ಪ್ಲಾಝಾದ ನೌಕರರಿಗೆ ಅಂದು ಹಲ್ಲೆ ನಡೆಸಿದ್ದರು. ಸಿಸಿಟಿವಿ ಫುಟೇಜ್‌ನಲ್ಲಿ ಶಾಸಕರ ದಾದಗಿರಿ ಬಹಿರಂಗವಾಗಿತ್ತು. ಶಾಸಕರ ಸಿಬ್ಬಂದಿಯೊಂದಿಗೆ ಟೋಲ್ ಗೇಟ್ ನೌಕರ ವಾಗ್ವಾದ ನಡೆಸುತ್ತಿದ್ದ. ಇದನ್ನು ನೋಡಿ ಸಹನೆಗೆಟ್ಟ ಶಾಸಕರು ಟೋಲ್‌ಗೇಟ್‌ನೌಕರನಿಗೆ ಹೊಡೆದಿದ್ದರು.







