ಬಡಗಬೆಳ್ಳೂರು: ನೂತನ ಮಸೀದಿ ಉದ್ಘಾಟನೆ

ಬಂಟ್ವಾಳ, ಮೇ.21: ಇಲ್ಲಿನ ಬಾಳಿಕೆ ಬಡಗಬೆಳ್ಳೂರಿನಲ್ಲಿ ಬೈಕಂಪಾಡಿ ಮರ್‌ಹೂಮ್ ಹುಸೈನ್ ಮತ್ತು ಮರ್‌ಹೂಮ ಖತೀಜಮ್ಮರವರ ಸ್ಮರಣಾರ್ಥವಾಗಿ ನಿರ್ಮಿಸಿದ ನೂತನ ಮಸೀದಿ 'ಮಸ್ಜಿದುಲ್ ಇಮಾಮ್ ಶಿಬ್ಲಿ'ಯನ್ನು ದ.ಕ ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ಉದ್ಘಾಟಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಲೀಂ ಸಿಬಿಯಾನ್ ಮದರಸ ಬಡಗಬೆಳ್ಳೂರು ಇದರ ಅಧ್ಯಕ್ಷರಾದ ಬಿ.ಎಚ್ ಮುಹಮ್ಮದ್ ಅಶ್ರಫ್ ವಹಿಸಿದ್ದರು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾದ ಶೈಖುನಾ ಕೆ.ಪಿ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಇವರು ದುಆ ನೆರವೇರಿಸಿದರು. ಬಳಿಕ ಹಸನ್ ಮುಸ್ಲಿಯಾರ್ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮುಲ್ಲರಪಟ್ನ ಮುಹಿಯುದ್ದೀನ್ ಜುಮಾ ಮಸೀದಿ ಖತೀಬರಾದ ಅಲ್ ಹಾಜ್ ಅಬ್ದುಲ್ ಖಾದಿರ್ ಮದನಿ ಉದ್ಫಾಟಿಸಿದರು. ಖಾಸಿಂ ದಾರಿಮಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚೊಕ್ಕಬೆಟ್ಟು ಜುಮಾ ಮಸೀದಿ ಖತೀಬರಾದ ಅಬ್ದುಲ್ ಅಝೀರ್ ದಾರಿಮಿ ಕ್ಲೇಗ ಮುಖ್ಯ ಪ್ರಭಾಷಣಗೈದರು.
ಈ ಸಂದರ್ಭದಲ್ಲಿ ಸೈಯದ್ ಅಸ್ಗರ್ ಅಲಿ ಜಾನ್ ತಂಙಳ್ ತರಿ ಗಂಜಿಮಠ, ಹಾಜಿ ಬಿ.ಎಚ್ ಅಸ್ಗರ್ ಅಲಿ, ಹಾಜಿ ಅಬ್ದುಲ್ ಬಶೀರ್ ಅಲಿ ಮಂಗಳೂರು, ನಂಡೆ ಪೆಂಙಲ್ ಅಭಿಯಾನದ ದ.ಕ ಜಿಲ್ಲಾ ಅಧ್ಯಕ್ಷರಾದ ಹಾಜಿ ನೌಶಾದ್ ಸುರಲ್ಪಾಡಿ, .ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ, ಮುಲರಪಟ್ನ ಜುಮಾ ಮಸೀದಿ ಅಧ್ಯಕ್ಷರಾದ ವಿ.ಎಚ್ ಹುಸೈನಬ್ಬ, ತಹಲೀಂ ಸಿಬಿಯಾನ್ ಮದರಸ ಬಡಗಬೆಳ್ಳೂರು ಪ್ರಧಾನ ಕಾರ್ಯದರ್ಶಿ ರಫೀಕ್, ಐಯುಎಂ ಮಂಗಳೂರು ಇದರ ಬಾಷಾ ತಂಙಲ್, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಜಾರಪ್ಪ ಪೂಜಾರಿ, ಬಾಳಿಕೆ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ರಾವ್ ಕೋಡಿ, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಎ ಹಾಜಬ್ಬ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ದೇವಪ್ಪ ಪೂಜಾರಿ ಮತ್ತು ಮೌರಿಸ್ ಡಿಸೋಜ, ಹಾಜಿ ಮಂಸೂರ್ ಅಹ್ಮದ್, ಮುಸ್ಲಿಂ ಸೆಂಟ್ರಲ್ ಕಮಿಟಿ ಇದರ ಹಾಜಿ ಹನೀಫ್ ಮಂಗಳೂರು, ಸೇರಿದಂತೆ ಬದ್ರುಲ್ ಹುದಾ ಯಂಗ್ ಮೆನ್ಸ್ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







