ಪ್ರಕೃತಿ ವಿಕೋಪ: ಸಂತ್ರಸ್ತರಿಗೆ ಚೆಕ್ ವಿತರಣೆ

ಮೂಡುಬಿದಿರೆ, ಮೇ 22: ಪಣಪಿಲ ಗ್ರಾಮದ ಬುಲಾಯಿ ಪಾಡಿಯಲ್ಲಿ ಮೇ 5ರಂದು ಸಿಡಿಲು ಬಡಿದು ಮೃತಪಟ್ಟ ವಿದ್ಯಾರ್ಥಿ ಲವಲೇಶ್ ಅವರ ತಂದೆ ಗುಮ್ಮಣ್ಣ ಪೂಜಾರಿಯವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 4 ಲಕ್ಷ ರೂ. ಚೆಕ್‌ನ್ನು ಶಾಸಕ ಕೆ. ಅಭಯ ಚಂದ್ರ ಜೈನ್ ಸೋಮವಾರ ತಸೀಲ್ದಾರ್ ಕಛೇರಿಯಲ್ಲಿ ಹಸ್ತಾಂತರಿಸಿದರು.
ಪಡುಮಾರ್ನಾಡು ಗ್ರಾಮದ ದಯಾನಂದ ಪೈ ಹಾಗೂ ನಿಡ್ಡೋಡಿಯ ಗೋಪಾಲ ಕೋಟ್ಯಾನ್ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ತಲಾ 5,200 ರೂ. ಗಳ ಚೆಕ್‌ನ್ನು ವಿತರಿಸಲಾಯಿತು.
ತಹಶೀಲ್ದಾರ್ ಮಹಮ್ಮದ್ ಇಸಾಕ್, ಉಪತಹಶೀಲ್ದಾರ್ ಅಬ್ದುಲ್ ರಹಿಮಾನ್, ಮಾಜಿ ತಾ.ಪಂ. ಸದಸ್ಯ ರುಕ್ಕಯ್ಯ ಪೂಜಾರಿ, ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಅಕ್ರಮ ಸಕ್ರಮ ಸಮಿತಿಯ ಸದಸ್ಯ ಸುಂದರ ಸಿ. ಪೂಜಾರಿ ಉಪಸ್ಥಿತರಿದ್ದರು.
Next Story





